ಉಸಿರಾಟದ ತೊಂದರೆ, ವಾಸನೆ ಕಳೆದುಕೊಳ್ಳೋದು, ಬಾಯಿ ರುಚಿ ಇಲ್ಲದೇ ಇರೋದು ಹೀಗೆ ಕೊರೊನಾ ರೋಗಕ್ಕೆ ಕೆಲವೊಂದಿಷ್ಟು ನಿಖರ ಲಕ್ಷಣಗಳನ್ನ ಈಗಾಗಲೇ ಗುರುತಿಸಲಾಗಿದೆ.
ಆದರೆ ಮುಂಬೈನಲ್ಲಿ ಮಾತ್ರ ಕೊರೊನಾ ರೋಗಿಯಲ್ಲಿ ವಿಚಿತ್ರ ಲಕ್ಷಣವೊಂದು ಪತ್ತೆಯಾಗಿದೆ. ಆಶ್ಚರ್ಯಕರ ವಿಚಾರ ಅಂದರೆ ಈ ಲಕ್ಷಣವು ಉಸಿರಾಟ ಸಂಬಂಧಿ ಸಮಸ್ಯೆಯೇ ಅಲ್ವಂತೆ..!
ಶಸ್ತ್ರ ಚಿಕಿತ್ಸಕರಾದ ಡಾ. ಮುಫಜಲ್ ಎಂಬವರು ನಾಲ್ವರು ರೋಗಿಗಳಲ್ಲಿ ಇಂತಹ ವಿಚಿತ್ರ ಲಕ್ಷಣವನ್ನ ಗುರುತಿಸಿದ್ದಾರೆ. ಇಲ್ಲಿ ರೋಗಿಗಳು ಸೇವಿಸಿದ ಆಹಾರ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಅಂದರೆ ರೋಗಿ ಸೇವಿಸಿದ ಆಹಾರ ಸಣ್ಣ ಹಾಗೂ ದೊಡ್ಡ ಕರುಳನ್ನ ತಲುಪೋಕೆ ಸಾಧ್ಯವೇ ಆಗುತ್ತಿಲ್ಲವಂತೆ.
ಹೊಸ ಕೊರೊನಾ ವೈರಸ್ ರೋಗ ಲಕ್ಷಣವು ಜಠರ ಸಂಬಂಧಿ ಸಮಸ್ಯೆಯನ್ನ ತೋರಿಸುತ್ತದೆ. ಹೀಗಾಗಿ ನಾವು ಇನ್ನಷ್ಟು ಜಾಗರೂಕರಾಗಿ ಇರಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
“ಹೊಸ ಕೊರೊನಾ ವೈರಸ್ ತಳಿಗಳು ಅತಿಸಾರ, ಕಿಬ್ಬೊಟ್ಟೆಯ ಕೋಲಿಕ್ ನೋವು ಮತ್ತು ಸಬಾಕ್ಯೂಟ್ ಕರುಳಿನ ಅಡಚಣೆಯಂತಹ ಜಠರಗರುಳಿನ ರೋಗಲಕ್ಷಣಗಳನ್ನು ತೋರಿಸುತ್ತಿವೆ. ನಾವು ಜಾಗರೂಕರಾಗಿರಬೇಕು”ಎಂದು ಲಕ್ಡಾವಾಲಾ ಹೇಳಿದರು.
ಕರುಳಿನ ಅಡಚಣೆಗೆ ಆಗಾಗ್ಗೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆ ಅಗತ್ಯವಿರುತ್ತದೆ ಎಂದು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ನಗರದ ಕೋವಿಡ್ ಡೆತ್ ಆಡಿಟ್ ಸಮಿತಿಯ ಮುಖ್ಯಸ್ಥರೂ ಆಗಿರುವ ಮಾಜಿ ಕೆಇಎಂ ಡೀನ್ ಡಾ. ಅವಿನಾಶ್ ಸುಪೆ, ವೈದ್ಯರು ಅತಿಸಾರವನ್ನು ಮರುಕಳಿಸುವ ಲಕ್ಷಣವಾಗಿ ನೋಡುತ್ತಿದ್ದಾರೆ ಎಂದು ಒಪ್ಪಿಕೊಂಡರು.