ರೈಲು ಹಳಿಯಲ್ಲಿ ಸಿಲುಕಿಕೊಂಡಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಮುಂಬೈ ಪೊಲೀಸ್ ಪೇದೆಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ.
ಘಟನೆಯು ಮುಂಬೈನ ದಹಿಸಾರ್ ರೈಲ್ವೇ ನಿಲ್ದಾಣಲ್ಲಿ ಜರುಗಿದೆ. ಈ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ. ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ರಕ್ಷಿಸಲಾದ ಈ ವ್ಯಕ್ತಿಯನ್ನು 60 ವರ್ಷದ ಗಣ್ಪತ್ ಸೋಲಂಕಿ ಎಂದು ಗುರುತಿಸಲಾಗಿದೆ.
ಬ್ಯಾರಿಕೇಡ್ ದಾಟಿಕೊಂಡು ಬರುತ್ತಿದ್ದ ಸೋಲಂಕಿ ರೈಲು ಹಳಿ ದಾಟುತ್ತಿದ್ದ ವೇಳೆ ಚಪ್ಪಲಿ ಜಾರಿಕೊಂಡಿದೆ. ಚಪ್ಪಲಿಯನ್ನು ಮತ್ತೆ ಎತ್ತಿಕೊಳ್ಳಲು ಹಳಿಯ ಮತ್ತೊಂದು ಬದಿಗೆ ಸರಿದಾಗ ಅಲ್ಲಿಯೇ ಇದ್ದ ರೈಲ್ವೇ ಸಿಬ್ಬಂದಿಯೊಬ್ಬರ ಕಣ್ಣಿಗೆ ಬಿದ್ದಿದ್ದಾರೆ. ಆಗ ರೈಲೊಂದು ಬರುತ್ತಿದೆ ಎಂದು ಪೇದೆ ಅವರಿಗೆ ಅಲರ್ಟ್ ಮಾಡಿದ್ದಾರೆ. ಇದಕ್ಕೆ ಕೇರ್ ಮಾಡದ ಆತ ತನ್ನ ಕೆಲಸ ಮುಂದುವರೆಸಿದ್ದಾನೆ.
ಇನ್ನೇನು ರೈಲು ಬಂದು ಆತನ ಮೇಲೆ ಹರಿದುಬಿಡುತ್ತದೆ ಎನ್ನುವಷ್ಟರಲ್ಲಿ ಎಸ್.ಬಿ. ನಿಕಮ್ ಹೆಸರಿನ ಪೇದೆ ಬಂದು ಆತನನ್ನು ಹಿಡಿದು ಎತ್ತಿದ್ದಾರೆ. ಎತ್ತಿದ ಕೂಡಲೇ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.