ಸೇಫ್ಟಿ ಪಿನ್ ನುಂಗಿದ್ದ 14 ದಿನದ ಶಿಶುವನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಗುವಿನ ಪ್ರಾಣ ಕಾಪಾಡಿದ ಪೊಲೀಸ್ ಪೇದೆಯೊಬ್ಬರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗಂಟಲಲ್ಲಿ ಸಿಲುಕಿದ್ದ ಸೇಫ್ಟಿ ಪಿನ್ ತೆಗೆಯಲು ಬಾರದೆ ಆತಂಕಕ್ಕೊಳಗಾಗಿದ್ದ ಪೋಷಕರು, ಮಗುವಿನ ಪ್ರಾಣಕ್ಕೆ ಏನು ಆಪತ್ತು ಕಾದಿದೆಯೋ ಎಂದು ಚಿಂತೆಗೀಡಾಗಿದ್ದರು.
ಅವಸರದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪೋಷಕರ ನೆರವಿಗೆ ಬಂದ ಕಾನ್ ಸ್ಟೇಬಲ್ ಎಸ್.ಕೋಲೆಕಾರ್, ತಡ ಮಾಡದೆಯೇ ತನ್ನ ಸ್ವಂತ ವಾಹನದಲ್ಲಿ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಸೇಫ್ಟಿ ಪಿನ್ ಹೊರತೆಗೆದಿದ್ದು, ಮಗುವೂ ಹುಷಾರಾಗಿದೆ. ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಮುಂಬೈ ಪೊಲೀಸರು, ಸಂಕಷ್ಟ, ಅನುಮಾನ ಬಂದ ಕೂಡಲೇ ಹತ್ತಿರದ ಪೊಲೀಸರ ನೆರವು ಪಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ. ಕಾನ್ ಸ್ಟೇಬಲ್ ಕೋಲೆಕಾರ್ ಅವರಿಗೆ ಧನ್ಯವಾದ ತಿಳಿಸಿರುವ ಟ್ವೀಟಿಗರು, ರೆಸ್ಪೆಕ್ಟ್ ! ಲವ್ ಯು ಮುಂಬೈ ಪೊಲೀಸ್….ಎಂದು ಶ್ಲಾಘಿಸಿದ್ದಾರೆ.
https://twitter.com/MumbaiPolice/status/1273458073915371520?ref_src=twsrc%5Etfw%7Ctwcamp%5Etweetembed%7Ctwterm%5E1273458073915371520&ref_url=https%3A%2F%2Fwww.timesnownews.com%2Fthe-buzz%2Farticle%2Fmumbai-cop-saves-14-day-old-baby-choking-on-safety-pin-earns-praise-on-social-media%2F608311