ಮುಂಬೈ: ಆಕೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಉತ್ತೀರ್ಣಳಾಗಿದ್ದಳು. ಆರಂಕಿ ವೇತನವಿತ್ತು. ಅವೆಲ್ಲವನ್ನೂ ಬಿಟ್ಟು ಸನ್ಯಾಸ ದೀಕ್ಷೆ ಪಡೆದಳು. ಮುಂಬೈನಲ್ಲಿ ಜೈನ ಸನ್ಯಾಸಿನಿಯಾದ ಮಹಿಳೆಯ ಅಪರೂಪದ ಕತೆ ಇಲ್ಲಿದೆ.
ಗುಜರಾತ್ ಮೂಲದ 31 ವರ್ಷದ ಪಾಯಲ್ ಶಹಾ ಭಾನುವಾರ ಜೈನ ಸಾಧ್ವಿಯಾಗಿ ಸನ್ಯಾಸ ಧೀಕ್ಷೆ ಪಡೆದರು. ಪಾಯಲ್ 2014 ರಲ್ಲಿ ಲೆಕ್ಕ ಪರಿಶೋಧಕಳಾಗಿ ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿ ಕೆಲಸ ಪ್ರಾರಂಭಿಸಿದ್ದರು. ಆಕರ್ಷಕ ವೇತನ ಆಕೆಗೆ ಸಮಾಧಾನ ತರಲಿಲ್ಲ.
ಸಮಾಧಾನ ಹುಡುಕಿಕೊಂಡು ತಮ್ಮ ಮನೆಯ ಸಮೀಪ ಇರುವ ಜೈನ ಸಾದ್ವಿಗಳನ್ನು ಅವರು ಭೇಟಿಯಾಗತೊಡಗಿದ್ದರು. ಅವರ ಶಾಂತ ಜೀವನಕ್ಕೆ ಮಾರು ಹೋದರು. ಗುರು ಮಹಾರಾಜ ಪರಮಲೋಚನ ಶ್ರೀಜಿ ಅವರ ಒಂದು ಭೇಟಿ ಪಾಯಲ್ ಅವರಿಗೆ ಜೀವನದ ಸಾಕ್ಷಾತ್ಕಾರ ಮಾಡಿಸಿತು. ಆಚಾರ್ಯ ಭಗವತ್ ಪ್ರವಚನ ಪ್ರಭಾವಕ ಕೃತಿ ಯಶ ಸುರೇಶ್ವರಜಿ ಅವರ ಸಮ್ಮುಖದಲ್ಲಿ ಸನ್ಯಾಸ ಧೀಕ್ಷೆ ಪಡೆದರು.