ಮೊಮ್ಮಗಳು 12ನೇ ತರಗತಿಯಲ್ಲಿ ಶೇ.80 ರಷ್ಟು ಅಂಕ ಗಳಿಸಿದಾಗ ಉಚಿತ ರಿಕ್ಷಾ ಸೇವೆ ನೀಡಿದ್ದ ಮುಂಬೈನ ದೇಸ್ ರಾಜ್, ಇದೀಗ ಅದೇ ಮೊಮ್ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಾನಿದ್ದ ಮನೆಯನ್ನೇ ಮಾರಿದ್ದಾರೆ.
ಮುಂಬೈನ ಮಾನವತವಾದಿ ಎಂದೇ ಕರೆಯಿಸಿಕೊಂಡಿರುವ ದೇಸ್ ರಾಜ್, ಇತ್ತೀಚೆಗೆ ತನ್ನ ಗಂಡು ಮಕ್ಕಳಿಬ್ಬರನ್ನೂ ಕಳೆದುಕೊಂಡಿದ್ದರು. ಮೊದಲ ಮಗ ಅಪಘಾತಕ್ಕೀಡಾದರೆ, ಕೊನೆಯ ಮಗ ಆತ್ಮಹತ್ಯೆಗೆ ಶರಣಾಗಿದ್ದ.
ತನ್ನ ಹೆಂಡತಿ, ಸೊಸೆ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಸಾಕುವ ಹೊಣೆ ದೇಸ್ ರಾಜ್ ಮೇಲಿತ್ತು. ಸ್ವಂತ ಮನೆ ಇದ್ದುದರಿಂದ ಆಟೋ ರಿಕ್ಷಾ ಓಡಿಸಿ, ಹಾಗೋ ಹೀಗೋ ಜೀವನ ನಡೆಸುತ್ತಿದ್ದರು.
ಅಂಗವಿಕಲತೆಯನ್ನು ಮೆಟ್ಟಿ ನಿಂತು ಅದ್ಬುತ ನೃತ್ಯ ಪ್ರದರ್ಶಿಸಿದ ನರ್ತಕಿ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮೊಮ್ಮಗಳು ಶೇ.80 ರಷ್ಟು ಅಂಕ ಪಡೆದಿದ್ದನ್ನು ಸಂಭ್ರಮಿಸುವುದಕ್ಕಾಗಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದ್ದರು. ಆಕೆ ದಿಲ್ಲಿಯಲ್ಲಿ ಬಿ.ಎಡ್. ಓದಬೇಕೆಂಬ ಕನಸು ನನಸು ಮಾಡುವುದಕ್ಕಾಗಿ ಸ್ವಂತ ಮನೆ ಮಾರಿ, ಹೆಂಡತಿ, ಸೊಸೆ ಹಾಗೂ ಉಳಿದ ಮೊಮ್ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟರು.
ತಾವು ಮಾತ್ರ ಆಟೋದಲ್ಲೇ ಜೀವನ ನಡೆಸುತ್ತಾ, ಪದವಿ ಪಡೆದು ಮೊಮ್ಮಗಳು ಶಿಕ್ಷಕಿ ಆಗುವುದನ್ನೇ ಕಾಯುತ್ತಿದ್ದಾರೆ. ಆಕೆ ಇಡೀ ಕುಟುಂಬದ ಮೊದಲ ಪದವೀಧರೆ ಎಂಬ ಹೆಮ್ಮೆ ನಮಗಿದೆ ಎನ್ನುತ್ತಾರೆ ದೇಸ್ ರಾಜ್.