ಲಾಕ್ಡೌನ್ ಟೈಂನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯವರೆಗೂ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಥಾನಾ ಕ್ಷೇತ್ರದ ಜಾವ್ರಾ ಕಾಂಪೌಂಡ್ ಇಲಾಖೆಯಲ್ಲಿ ಈ ಕೊಲೆ ನಡೆದಿದೆ. ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಪತ್ನಿಯ ಕುತ್ತಿಗೆಗೆ ನಾಯಿಗೆ ಹಾಕುವ ಚೈನ್ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಹಾಗೂ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪೊಲೀಸರು ಮೃತ ಮಹಿಳೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂಶು ಶರ್ಮಾ ಹಾಗೂ ಹರ್ಷ ನಡುವೆ ಲಾಕ್ಡೌನ್ ಸಮಯದಲ್ಲಿ ಪ್ರೀತಿಯಾಗಿತ್ತು. ಆಗಸ್ಟ್ನಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಪರಿವಾರದ ಕಲಹದಿಂದ ಬೇಸತ್ತ ಪತಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಅಂಶು ಶರ್ಮಾಳನ್ನ ಕೊಲೆಗೈದಿದ್ದಾನೆ.