ಮಡದಿಯ ಮೇಲೆ ದೈಹಿಕ ಹಲ್ಲೆ ಮಾಡಲು ಮುಂದಾದ ಮಧ್ಯ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಹೆಚ್ಚುವರಿ ಮಹಾ ನಿರ್ದೇಶಕರ ರ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಪುರುಶೋತ್ತಮ್ ಶರ್ಮಾ ತಮ್ಮ ಮಡದಿ ಮೇಲೆ ಹಲ್ಲೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಶರ್ಮಾಗೆ ಅಕ್ರಮ ಸಂಬಂಧ ಇದ್ದಿದ್ದು ಅವರ ಮಡದಿಗೆ ತಿಳಿದಿತ್ತು ಎಂದು ಹೇಳಲಾಗಿದೆ. ಮಡದಿಯೊಂದಿಗೆ ಇದೇ ವಿಚಾರವಾಗಿ ಜಗಳವಾಡುತ್ತಿದ್ದ ವೇಳೆ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಶರ್ಮಾರ ವರ್ತನೆ ಬಗ್ಗೆ ನೆಟ್ಟಿಗರು ಸಾಕಷ್ಟು ಅಸಮಾಧಾನ ತೋರಿದ್ದಾರೆ.
“ಇದೊಂದು ಕೌಟುಂಬಿಕ ಕಲಹವಾಗಿದೆ. ನಾವು 32 ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದೇವೆ. 2008ರಲ್ಲಿ ಆಕೆ ನನ್ನ ಮೇಲೆ ದೂರು ದಾಖಲಿಸಿದ್ದಳು. ಆದರೂ ಸಹ ಆಕೆ 2008ರಿಂದ ನನ್ನ ಮನೆಯಲ್ಲೇ ವಾಸವಿದ್ದು, ಸಕಲ ಸೌಕರ್ಯಗಳನ್ನೂ ಅನುಭವಿಸುತ್ತಿದ್ದು, ನನ್ನದೇ ಖರ್ಚಿನಲ್ಲಿ ವಿದೇಶ ಪ್ರವಾಸಗಳನ್ನೂ ಮಾಡುತ್ತಿದ್ದಾಳೆ” ಎಂದು ಶರ್ಮಾ ತಿಳಿಸಿದ್ದಾರೆ.
https://twitter.com/Anurag_Dwary/status/1310437507276840965?ref_src=twsrc%5Etfw%7Ctwcamp%5Etweetembed%7Ctwterm%5E1310437507276840965%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fmp-senior-cop-caught-beating-wife-in-viral-video-says-she-lived-on-his-expense-for-years-2915847.html
https://twitter.com/FaraaahKhan/status/1310528569529921537?ref_src=twsrc%5Etfw%7Ctwcamp%5Etweetembed%7Ctwterm%5E1310528569529921537%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fmp-senior-cop-caught-beating-wife-in-viral-video-says-she-lived-on-his-expense-for-years-2915847.html