alex Certify ಐದೇ ದಿನದಲ್ಲಿ ಎರಡೆರಡು ಮದುವೆಯಾದ ಟೆಕ್ಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದೇ ದಿನದಲ್ಲಿ ಎರಡೆರಡು ಮದುವೆಯಾದ ಟೆಕ್ಕಿ..!

26 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಕೇವಲ 5 ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗಿ ಬಳಿಕ ಪರಾರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಹಿಳೆ ಕುಟುಂಬ ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಖಾಂಡ್ವಾ ಕೊಟ್ವಾಲಿ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​​ ಬಿ.ಎಲ್​. ಮಾಂಡೊಯ್ಲಿ ಮಾಹಿತಿ ನೀಡಿದ್ರು.

ಇಂದೋರ್​ನ ಮುಸಖೇಡಿ ಪ್ರದೇಶದ ನಿವಾಸಿಯಾಗಿರುವ ಟೆಕ್ಕಿ ಡಿಸೆಂಬರ್​ 2ರಂದು ಖಾಂಡ್ವಾದಲ್ಲಿ ಮಹಿಳೆಯನ್ನ ಹಾಗೂ ಡಿಸೆಂಬರ್​ 7ರಂದು ಇಂದೋರ್​ನ ವ್ಹೋವ್​​ನಲ್ಲಿ ಇನ್ನೊಬ್ಬ ಮಹಿಳೆಯನ್ನ ವಿವಾಹವಾಗಿದ್ದ. ಇಂದೋರ್​​ನಲ್ಲಿ ನಡೆದ ವಿವಾಹ ಭೋಜನಕ್ಕೆ ತೆರಳಿದ್ದ ಖಾಂಡ್ವಾ ಮಹಿಳೆಯ ಕುಟುಂಬಸ್ಥರು ಫೋಟೋವನ್ನ ಕಳುಹಿಸಿದ್ದಾರೆ.

ಇದೀಗ ಆರೋಪಿ ಪರಾರಿಯಾಗಿದ್ದು ಆತನ ಮೊಬೈಲ್​ ಸ್ವಿಚ್​ ಆಫ್​ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು ತಲಾಶ್ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...