ಇದೊಂದು ವಿಚಿತ್ರ ಪ್ರಕರಣ. ಒಳಉಡುಪನ್ನು ಅಳತೆ ಕೊಟ್ಟ ಸೈಜಿಗಿಂತ ಚಿಕ್ಕದಾಗಿ ಹೊಲಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಟೈಲರ್ ವಿರುದ್ಧ ಪೊಲೀಸ್ ರಲ್ಲಿ ನ್ಯಾಯಕೇಳಿದ ಪ್ರಸಂಗ ನಡೆದಿದೆ.
ಕೃಷ್ಣಕುಮಾರ್ ದುಬೆ ಎಂಬ ಸೆಕ್ಯೂರಿಟಿ ಗಾರ್ಡ್ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಕೆಲಸ ಮಾಡುತ್ತಿದ್ದ, ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡು ಗ್ರಾಮಕ್ಕೆ ವಾಪಸಾಗಿದ್ದ.
ಇದೇ ವೇಳೆ ತನ್ನ ಗೆಳೆಯರಿಂದ ಸಾವಿರ ರೂಪಾಯಿ ಸಾಲ ಪಡೆದು 2 ಒಳಉಡುಪು ಹೊಲಿಸಲು ಅಲ್ಲಿನ ಟೈಲರ್ ಗೆ ಎರಡು ಮೀಟರ್ ಬಟ್ಟೆ ಸಹಿತ 190 ರೂ. ನೀಡಿದ್ದ.
ಟೈಲರ್ ಒಳಉಡುಪು ಹೊಲಿದು ವಾಪಾಸು ನೀಡಿದಾಗ ಕೃಷ್ಣಕುಮಾರ್ ಗೆ ಕಸಿವಿಸಿ ಉಂಟಾಯಿತು, ಏಕೆಂದರೆ ಎರಡು ಒಳಉಡುಪುಗಳು ಚಿಕ್ಕದಾಗಿತ್ತು. ಬಟ್ಟೆ ಖರೀದಿಸಿದ ಅಂಗಡಿಗೆ ತೆರಳಿ, ಎಷ್ಟು ಬಟ್ಟೆ ನೀಡಲಾಗಿತ್ತು ಎಂದು ಖಚಿತಪಡಿಸಿಕೊಂಡನು. ಬಳಿಕ ತನಗೆ ನ್ಯಾಯ ಸಿಗದೆಂದು ಗೊತ್ತಾದಾಗ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರಿತ್ತ.
ಪೊಲೀಸರು ನ್ಯಾಯಾಲಯದ ಮೆಟ್ಟಿಲೇರು ಎಂದು ಸಲಹೆಯನ್ನೂ ನೀಡಿದರಂತೆ. ಬಳಿಕ ನಡೆದ ನ್ಯಾಯ ಪಂಚಾಯ್ತಿಯಲ್ಲಿ ಟೈಲರ್ ಹಣ ಹಿಂದಿರುಗಿಸಲು ಒಪ್ಪಿದನಂತೆ.