ಕೋವಿಡ್-19 ಸಾಂಕ್ರಮಿಕವು ಎಲ್ಲೆಡೆ ಹಬ್ಬಿದ್ದರೂ ಸಹ ತಮ್ಮ ಊರಿಗೆ ಭೇಟಿ ನೀಡಿದ್ದ ವೇಳೆ ಲಾಕ್ಡೌನ್ ನಿಯಮಾವಳಿ ಪಾಲಿಸದೇ ಸುದ್ದಿಗೆ ಬಂದಿದ್ದ ಮಧ್ಯ ಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ ಮಿಶ್ರಾ ಭಾರೀ ವಿವಾದಕ್ಕೆ ತುತ್ತಾಗಿದ್ದರು.
ಇದೇ ಮಿಶ್ರಾ, ಮಂಗಳವಾರದಂದು ಫ್ಯಾನ್ಸಿ ವಿಚಾರವೊಂದರಿಂದ ಸದ್ದು ಮಾಡುತ್ತಿದ್ದಾರೆ. ತಮ್ಮದೇ ಫೋಟೋ ಇರುವ ವಿಶಿಷ್ಟ ಮಾಸ್ಕ್ ಒಂದನ್ನು ಧರಿಸಿರುವ ಮಿಶ್ರಾ, ಮತ್ತೆ ಸುದ್ದಿಯಲ್ಲಿದ್ದಾರೆ.