ಸಂಸ್ಕೃತ ಭಾಷೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಸ್ಕೃತ ಪಾಠಶಾಲೆಯನ್ನ ಆರಂಭಿಸಲಿದೆ.
ಎಲ್ಕೆಜಿ ಹಾಗೂ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸಂಸ್ಕೃತ ಭಾಷೆಯನ್ನ ಪರಿಚಯಿಸುವ ಪ್ರಯತ್ನ ಇದಾಗಿದೆ. ಶ್ಲೋಕ, ಸಂಸ್ಕೃತದಲ್ಲಿ ವಸ್ತುಗಳನ್ನ ಗುರುತಿಸುವಿಕೆ, ಸಂಸ್ಕೃತದಲ್ಲಿ ಮಾತನಾಡುವ ಮೂಲಕ ಮಕ್ಕಳಿಗೆ ಸಂಸ್ಕೃತ ಭಾಷೆ ಕಲಿಸಲು ಮುಂದಾಗಿದೆ.
ಸಂಸ್ಕೃತ ಎಲ್ಲಾ ಭಾಷೆಯ ತಾಯಿಯಾಗಿದೆ. ಹೀಗಾಗಿ ಈ ಸಂಸ್ಕೃತ ಭಾಷೆಯನ್ನ ಉಳಿಸಬೇಕಾದ ಅಗತ್ಯವಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕೃತದ ಕಲಿಕೆ ಶುರು ಮಾಡಿದ್ರೆ ಅವರಿಗೆ ಸಂಸ್ಕೃತ ಕಲಿಯೋದು ಸುಲಭವಾಗುತ್ತೆ. ಹೀಗಾಗಿ ಎಲ್ಕೆಜಿ, ಯುಕೆಜಿಯಲ್ಲಿ ಈಗಿರುವ ಪಠ್ಯಕ್ರಮದ ಜೊತೆಗೆ ಸಂಸ್ಕೃತವನ್ನೂ ಸೇರಿಸಲಿದ್ದೇವೆ ಅಂತಾ ಮಧ್ಯಪ್ರದೇಶ ಪ್ರಾಥಮಿಕ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ಹೇಳಿದ್ದಾರೆ.
ಸಂಸ್ಕೃತ ಪಠ್ಯಕ್ರಮ, ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಪ್ರಕ್ರಿಯೆಗಳಲ್ಲಿ ಸರ್ಕಾರಕ್ಕೆ ಎಂಪಿ ಸ್ಟೇಟ್ ಓಪನ್ ಸ್ಕೂಲ್ ಎಜುಕೇಶನ್ ಬೋರ್ಡ್ ಹಾಗೂ ಯೋಗ ಗುರು ಬಾಬಾ ರಾಮ್ದೇವರ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನ ಸಾಥ್ ನೀಡಲಿದೆ ಎಂದು ಹೇಳಿದ್ರು.