alex Certify ಬಂಜರು ಭೂಮಿಯನ್ನ ಹಸಿರು ನೆಲೆಯಾಗಿಸಿದ ಅರಣ್ಯ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಜರು ಭೂಮಿಯನ್ನ ಹಸಿರು ನೆಲೆಯಾಗಿಸಿದ ಅರಣ್ಯ ಇಲಾಖೆ

MP Forest Official Turns Barren Land into Green Hill by Planting 54000 Saplings in a Day

ಮಧ್ಯ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ 54,000 ಸಸಿಗಳನ್ನು ನೆಡುವ ಮೂಲಕ ಬಂಜರು ಭೂಮಿಯನ್ನ ಬೆಟ್ಟವನ್ನಾಗಿ ಪರಿವರ್ತಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಉತ್ತರ ಬೆತುಲ್​ ವಿಭಾಗದ ಅರಣ್ಯಾಧಿಕಾರಿ ಪುನೀತ್​ ಘೋಯಲ್​, ಶಹಪುರ ವಿಭಾಗದ ಬೊಂಡ್ರಿ ಬೆಟ್ಟದ 46 ಹೆಕ್ಟೇರ್​ ಪ್ರದೇಶದಲ್ಲಿ ಮರಗಳನ್ನ ನೆಡುವ ಗುರಿ ಹೊಂದಿದ್ದೆವು . ಹೀಗಾಗಿ ಅರಣ್ಯೀಕರಣ ನಿಧಿ ಹಾಗೂ ಯೋಜನಾ ಪ್ರಾಧಿಕಾರದ ಅಡಿಯಲ್ಲಿ ಈ ಕಾರ್ಯಕ್ರಮವನ್ನ ಯಶಸ್ವಿಯಾಗಿ ಪೂರೈಸಿದೆವು ಅಂತಾ ಮಾಹಿತಿ ನೀಡಿದ್ರು.

ಬಂಜರು ಭೂಮಿಯಲ್ಲಿ ಸಸಿಗಳನ್ನ ನೆಡೋದು ಅಂದ್ರೆ ಸುಲಭದ ಕೆಲಸವಾಗಿರಲಿಲ್ಲ. ಒರಟಾದ ಭೂ ಪ್ರದೇಶ ಹೊಂದಿರುವ ಈ ಜಾಗದಲ್ಲಿ ಹೆಚ್ಚಾಗಿ ತೇಗ ಹಾಗೂ ಬಿದಿರಿನ ಪ್ರಭೇದದ ಸಸ್ಯಗಳನ್ನ ನೆಡಲಾಗಿದೆ. ಏಕೆಂದರೆ ಈ ಸಸಿಗಳು ಗಟ್ಟಿಯಾದ ಕಲ್ಲು ಮಿಶ್ರಿತ ಮಣ್ಣಿನಲ್ಲೂ ಬೆಳೆಯುವ ಸಾಮರ್ಥ್ಯ ಹೊಂದಿವೆ.

ಈ ಸಸಿಗಳಿಂದ ಕಾರ್ಬನ್​ ಡೈ ಆಕ್ಸೈಡ್​ ಪ್ರಮಾಣ ಕಡಿಮೆಯಾಗಿ ಪರಿಸರದಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಾಗೋದ್ರ ಜೊತೆಗೆ ಬಿದಿರು ಹಾಗೂ ತೇಗ ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಜೀವನೋಪಾಯಕ್ಕೆ ದಾರಿಯನ್ನೂ ಮಾಡಿಕೊಡಲಿದೆ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ರು. ಇನ್ನು ಈ ಸಸಿ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಅಧಿಕಾರಿಗಳ ಜೊತೆ 1000ಕ್ಕೂ ಹೆಚ್ಚು ಮಂದಿ ಸ್ಥಳೀಯರು ಕೈ ಜೋಡಿಸಿದ್ರು.

ಮಧ್ಯ ಪ್ರದೇಶ ಅರಣ್ಯ ಇಲಾಖೆಯ ಈ ಪ್ರಯತ್ನದ ಬಗ್ಗೆ ಪೂಣೆ ಮೂಲದ ಎನ್​ಜಿಓ ಒಂದು ವರದಿ ಮಾಡಿದ್ದು ಇಷ್ಟು ವಿಸ್ತೀರ್ಣ ಪ್ರದೇಶಗಳಲ್ಲಿ ವಿವಿಧ ಬಗೆಯ ಸಸಿಗಳನ್ನ ನೆಡಬೇಕಿತ್ತು. ಒಂದೇ ಬಗೆಯ ಸಸಿಗಳು ಪ್ರಾಣಿಗಳು ಹಾಗೂ ಸಸ್ಯಗಳ ಬೆಳವಣಿಗೆಯನ್ನ ಏಕಸಂಸ್ಕೃತಿಗೆ ಸೀಮಿತಗೊಳಿಸಿಬಿಡುತ್ತೆ ಅಂತಾ ಅಭಿಪ್ರಾಯಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...