ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ.
ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಅವರು ತಮ್ಮ ಪರಿಧಿಯಲ್ಲಿ ನಡೆಯುವ ಮದುವೆ ಮನೆಯಲ್ಲಿ ಜನ ಸೇರುವುದನ್ನು ಕಡಿಮೆ ಮಾಡಲು ಹೊಸ ಟೆಕ್ನಿಕ್ ಬಳಸಿದ್ದಾರೆ.
ಮದುವೆಗೆ 10 ಅತಿಥಿಗಳಿಗಿಂತ ಕಡಿಮೆ ಅತಿಥಿಗಳನ್ನು ಆಹ್ವಾನಿಸುವ ದಂಪತಿಗೆ ಔತಣಕೂಟ ನೀಡುವುದಾಗಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ವಿವಾಹ ಸಮಾರಂಭಗಳಲ್ಲಿ ಗರಿಷ್ಠ 50 ಅತಿಥಿಗಳನ್ನು ಆಹ್ವಾನಿಸಬಹುದಾಗಿದೆ. ಅಷ್ಟು ಜನರೂ ಸೇರುವುದು ಈಗಿನ ಸಂದರ್ಭಕ್ಕೆ ಒಳ್ಳೆಯದಲ್ಲ ಎಂಬುದು ಪೊಲೀಸ್ ಅಧಿಕಾರಿಯ ಅಭಿಪ್ರಾಯವಾಗಿದೆ.
ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ ಪಾಸ್‌ಪೋರ್ಟ್ ಸೀಜ್….!
ಕುರ್ತಾರ ಎಂಬ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್‌ಗಳಿಲ್ಲದೆ ಜನರು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವವರಿಗೆ ಪ್ರೋತ್ಸಾಹಕವಾಗಿ ಉಡುಗೊರೆ ನೀಡುವುದಾಗಿ ಎಸ್ಪಿ ಘೋಷಿಸಿದರು.
ಮದುವೆ ಮನೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಪಾರಿತೋಷಕ ನೀಡಲಾಗುವುದು ಮತ್ತು ಅವರನ್ನು ಮನೆಗೆ ಬಿಡಲು ಸರ್ಕಾರಿ ವಾಹನವನ್ನು ನಿಯೋಜಿಸಲಾಗುವುದು ಎಂದು ಅವರು ವಿಶೇಷವಾದ ಆಫರ್ ಪ್ರಕಟಿಸಿದರು.
ಏಪ್ರಿಲ್ 30ರಂದು ಮದುವೆಯಾಗುವ ಜೋಡಿ ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಸೀಮಿತಗೊಳಿಸಲು ಯೋಜಿಸುತ್ತಿದ್ದಾರೆಂದು ನನಗೆ ಮಾಹಿತಿ ಇದೆ, ಒಂದುವೇಳೆ ಅವರು ಹಾಗೆ ಮಾಡಿದರೆ ನನ್ನ ಕುಟುಂಬದೊಂದಿಗೆ ನನ್ನ ಮನೆಯಲ್ಲಿಯೇ ಅವರಿಗೆ ಔತಣಕೂಟ ಆಯೋಜಿಸುವೆ ಎಂದು ಎಸ್ಪಿ ಹೇಳಿದರು.