ಸ್ಪೇನ್ ಪರ್ವತಾರೋಹಿಯೊಬ್ಬರು ಅಲ್ಲಿನ ಪರ್ವತವೊಂದಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರಿಟ್ಟಿದ್ದಾರೆ. ಸ್ಪೇನ್ ದೇಶದ ಅವಿಲಾ ನಗರದ ಸಮೀಪವಿರುವ ಅತಿ ಎತ್ತರದ ಬೆಟ್ಟ ವರ್ಜಿನ್ ಪೀಕ್ ಸಮೀಪ ಇರುವ ಪರ್ವತದ ತುತ್ತ ತುದಿಯನ್ನು ಜುನಾ ಅಂಟೋನಿಯೋ ಹಾಗೂ ಅವರ ಸ್ನೇಹಿತ ಡೇವಿಡ್ ರೆಸಿನೊ ಹತ್ತಿ ಅದು 2,950 ಮೀಟರ್ ಇದೆ ಎಂದು ಅಳೆದಿದ್ದಾರೆ.
ಈ ಬೆಟ್ಟಕ್ಕೆ ಮ್ಯಾಜಿಸ್ಟ್ರೇಟ್ ಪಾಯಿಂಟ್ ಎಂದು ಹೆಸರಿಡಲು ನಿರ್ಧರಿಸಿದ್ದು, ಅದಕ್ಕೆ ತೆರಳುವ ಮಾರ್ಗಕ್ಕೆ ಉತ್ತರಾಖಂಡ ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಆಶಿಷ್ ಚೌಹಾಣ್ ಅವರ ಹೆಸರಿಡಲು ನಿರ್ಧರಿಸಿದ್ದೇವೆ ಎಂದು ಆಂಟೋನಿಯೊ ಹೇಳಿದ್ದಾರೆ.
ಉಪಕಾರ ಸ್ಮರಣೆಗೆ ಹೆರಿಟ್ಟರು.!
ಅಂಟೋನಿಯೋ ಹಿಮಾಲಯದ ಗಂಗೋತ್ರಿ ಭಾಗದಲ್ಲಿ ಟ್ರಕ್ಕಿಂಗ್ ಮಾಡುವಾಗ ಅವರ ಆರೋಗ್ಯ ಹದಗೆಟ್ಟಿತ್ತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಆಶಿಷ್ ಚೌಹಾಣ್ ಸಹಾಯ ಮಾಡಿದ್ದರು. ನನಗೆ ಅವರು ಮಾಡಿದ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅಂಟೋನಿಯೊ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಅತಿಥಿ ದೇವೋಭವ” ಎಂಬುದು ನಮ್ಮ ಭಾರತೀಯ ಸಂಸ್ಕೃತಿ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಅದನ್ನು ಮಾಡಿದ್ದೇನೆ ಅಷ್ಟೇ” ಎಂದು ಚೌಹಾಣ್ ಹೇಳಿದ್ದಾರೆ.