ತಾಯಿ-ಮಕ್ಕಳ ಸಂಬಂಧವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಮಕ್ಕಳಿಗಾಗಿ ತಾಯಿ ಪ್ರಾಣ ತ್ಯಾಗಕ್ಕೂ ಸಿದ್ಧವಿರ್ತಾಳೆ. ಹೇಳದೆ ಮಕ್ಕಳ ಸಂತೋಷ-ನೋವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ತಾಯಿಗಿದೆ. ಅಮ್ಮ ಮಕ್ಕಳಿಗೆ ಸಾಗರದಷ್ಟು ಪ್ರೀತಿ ನೀಡ್ತಾಳೆ. ಆದ್ರೆ ಬಹುತೇಕ ಮಕ್ಕಳು ಅಮ್ಮನ ಮೇಲೆ ಅಪಾರ ಪ್ರೀತಿಯಿದ್ದರೂ ಅದನ್ನು ವ್ಯಕ್ತಪಡಿಸುವುದಿಲ್ಲ. ಅಮ್ಮನ ಮುಂದೆ ಕ್ಷಮೆ ಕೇಳುವುದಾಗ್ಲಿ, ಥ್ಯಾಂಕ್ಸ್ ಹೇಳುವುದಾಗ್ಲಿ ಮಾಡುವುದಿಲ್ಲ. ಅಮ್ಮ ದೂರವಾದ ಮೇಲೆ ಕಣ್ಣೀರಿಡುತ್ತಾರೆ.
ಅಮ್ಮ ನಮ್ಮ ಜೊತೆಗಿದ್ದಾಗ ಆಕೆಯನ್ನು ಖುಷಿಯಾಗಿಟ್ಟುಕೊಳ್ಳುವುದು ಮಕ್ಕಳ ಜವಾಬ್ದಾರಿ. ಅಮ್ಮನಿಗೆ ದುಬಾರಿ ಉಡುಗೊರೆ ನೀಡಿ ಪ್ರೀತಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ರೆ ನಿಮ್ಮ ಪ್ರೀತಿ ಅಮ್ಮನಿಗೆ ಅರ್ಥವಾಗುತ್ತದೆ. ಈ ಬಾರಿ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗ್ತಿದೆ. ಇಷ್ಟು ದಿನ ಹೇಳದೆ ಮನಸ್ಸಿನಲ್ಲಿಟ್ಟುಕೊಂಡ ಅದೆಷ್ಟೋ ಸಾರಿ, ಥ್ಯಾಂಕ್ಸ್ ಗಳನ್ನು ಅಮ್ಮನಿಗೆ ಹೇಳಿಬಿಡಿ. ಜೊತೆಗೆ ಸಣ್ಣದೊಂದು ಉಡುಗೊರೆ ನೀಡಿ.
ಅಮ್ಮನಿಗೆ ಉಡುಗೊರೆ ನೀಡುವುದೇ ಆದಲ್ಲಿ ಸದಾ ಅಮ್ಮನಿಗೆ ನೆನಪಿರುವ ಹಾಗೂ ಅನೇಕ ವರ್ಷ ಬಾಳಿಕೆ ಬರುವಂತಹ ವಸ್ತುವನ್ನು ಉಡುಗೊರೆಯಾಗಿ ನೀಡಿ. ಉಡುಗೊರೆ ಖರೀದಿ ಮಾಡುವ ವೇಳೆ ಅಮ್ಮನ ಇಷ್ಟ-ಕಷ್ಟಗಳ ಬಗ್ಗೆ ಗಮನವಿರಲಿ.
ಪ್ರತಿಯೊಬ್ಬ ಮಹಿಳೆ ಸೀರೆಯನ್ನು ಇಷ್ಟಪಡ್ತಾಳೆ. ಹಾಗಾಗಿ ಅಮ್ಮನಿಗೊಂದು ಸುಂದರ ಸೀರೆಯನ್ನು ನೀವು ಉಡುಗೊರೆಯಾಗಿ ನೀಡಬಹುದು. ಕಾಟನ್, ಸಿಂಥೆಟಿಕ್ ಬದಲು ಈ ಬಾರಿ ಲೆನಿನ್ ಫ್ಯಾಬ್ರಿಕ್ ಸೀರೆಯನ್ನು ಉಡುಗೊರೆಯಾಗಿ ನೀಡಿ.
ಅಮ್ಮ ಕಾಫಿ ಅಥವಾ ಟೀ ಕುಡಿಯುವ ಹವ್ಯಾಸಿಯಾಗಿದ್ದರೆ ಸುಂದರ ಟೀ ಕಪ್ ಒಂದನ್ನು ಉಡುಗೊರೆಯಾಗಿ ನೀಡಿ. ಅದ್ರ ಮೇಲೆ ಅಪ್ಪ-ನೀವಿರುವ ಫೋಟೋ ಅಥವಾ ಸುಂದರ ಸಂದೇಶವನ್ನು ಬರೆಯಿಸಬಹುದು. ಪ್ರತಿದಿನ ಟೀ ಕುಡಿಯುವಾಗ ಅಮ್ಮ ನಿಮ್ಮ ಉಡುಗೊರೆಯನ್ನು ನೆನಪಿಸಿಕೊಳ್ತಾರೆ.
ಅಮ್ಮನ ಕೈನಲ್ಲಿ ಇನ್ನೂ ಮೊಬೈಲ್ ಬಂದಿಲ್ಲವಾದ್ರೆ ಸಣ್ಣ ಮೊಬೈಲ್ ಒಂದನ್ನು ಅವ್ರ ಕೈಗೆ ನೀಡಬಹುದು. ಈಗ ಮೊಬೈಲ್ ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರ ಕೈನಲ್ಲಿ ಮೊಬೈಲ್ ಇರಬೇಕು. ಹಾಗಾಗಿ ಅಮ್ಮನಿಗೊಂದು ಮೊಬೈಲ್ ಉಡುಗೊರೆಯಾಗಿ ನೀಡಿ.