ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಜನಜೀವನ ಸ್ತಬ್ಧಗೊಂಡಿದೆ. ಇದೇ ವೇಳೆ ಬಡವರು ಹಾಗೂ ದಿನಗೂಲಿಯನ್ನೇ ನಂಬಿಕೊಂಡಿರುವ ಜನರಿಗೆ ಒಪ್ಪೊತ್ತಿನ ಊಟಕ್ಕೂ ಭಾರೀ ಕಷ್ಟವಾಗಿಬಿಟ್ಟಿದೆ.
ಇಂಥ ಸಂದರ್ಭದಲ್ಲಿ ಬಹಳಷ್ಟು ಮಂದಿ ಸಹೃದಯಿಗಳು ಮುಂದೆ ಬಂದು ತಮ್ಮ ಕೈಲಾದ ನೆರವನ್ನು ಕೊಡುವ ಮೂಲಕ ಹಸಿದವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಇದೇ ರೀತಿ ಹೀನಾ ಮಾಂಡವಿಯಾ ಹಾಗೂ ಅವರ ಪುತ್ರ ಹರ್ಷ್ ಕಳೆದ ವರ್ಷದಿಂದ ಊಟದ ಅಗತ್ಯವಿರುವ ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. 100 ಮಂದಿಗೆ ಊಟದ ಅಗತ್ಯವಿದೆ ಎಂದು ಮೊದಲ ಲಾಕ್‌ಡೌನ್ ವೇಳೆಯಲ್ಲಿ ತಮ್ಮಲ್ಲಿಗೆ ಬಂದ ವ್ಯಕ್ತಿಯೊಬ್ಬರಿಂದ ಈ ಸತ್ಕಾರ್ಯಕ್ಕೆ ಮುಂದಾದ ತಾಯಿ-ಮಗ ಇದುವರೆಗೂ 22,000 ಕ್ಕೂ ಹೆಚ್ಚು ಮಂದಿಯ ಹಸಿವು ನೀಗಿಸಿದ್ದಾರೆ.
“ಮೊದಲಿಗೆ 100 ಮಂದಿ ಬಡವರಿಗೆ ಅಡುಗೆ ಮಾಡಿ ಡಬ್ಬಗಳಲ್ಲಿ ಇಟ್ಟು ವಿತರಿಸಿದ್ದೆವು. ಬಳಿಕ ನಾವು ಆರ್ಡರ್‌ಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಆನ್ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಎಲ್ಲೆಡೆಯಿಂದ ಜನರು ಹಣವನ್ನು ದೇಣಿಗೆ ಕೊಡಲು ಆರಂಭಿಸಿದರು. ಅಮ್ಮ ಹಾಗೂ ನಾನು ಪ್ರತಿನಿತ್ಯ 150 ಮಂದಿಗೆ ಊಟ ಬಡಿಸಲು ಶಕ್ತರಾದೆವು. ನಾವು ಇದರಿಂದ ದುಡ್ಡು ಮಾಡದೇ ಇದ್ದರೂ ಸಾರ್ಥಕ ಭಾವ ಮೂಡುತ್ತಿತ್ತು” ಎನ್ನುತ್ತಾರೆ ಹರ್ಷ್.
ಲಸಿಕೆ ವಿತರಣೆ ಬಗ್ಗೆ ಸಚಿವರಿಂದ ಭರ್ಜರಿ ಸಿಹಿ ಸುದ್ದಿ: ಮೇ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಹರ್ಷ್ ಹಾಗೂ ಅವರ ತಾಯಿ ದೇಣಿಗೆ ಸಂಗ್ರಹದ ಮೂಲಕ 1.5 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದು, ಇನ್ನೂ ಹೆಚ್ಚು ಮಂದಿಗೆ ಊಟ ಮಾಡಿಕೊಡುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಹರ್ಷ್‌ಗೆ ಅವರ ತಾಯಿ ಟಿಫಿನ್ ಸರ್ವಿಸ್ ನಡೆಸಿಕೊಂಡು ಮನೆಮನೆಗೆ ಖುದ್ದು ತಲುಪಿಸಿಕೊಂಡು, ಬಹಳ ಶ್ರಮದಿಂದ ಸಾಕಿ ಬೆಳೆಸಿದ್ದಾರೆ.
“ಕೆಲವೊಮ್ಮೆ ’ನೀವೇಕೆ ಅಪರಿಚಿತರಿಗಾಗಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ?’ ಎಂದು ಕೆಲವರು ಕೇಳುತ್ತಾರೆ. ಆಗ ನನಗೆ ಇದೇ ಅಪರಿಚಿತರು ಇಂದು ನಾವಿರುವ ಸ್ಥಾನ ತಲುಪಲು ನೆರವಾದ ಸಂಗತಿ ಅರಿವಿಗೆ ಬರುತ್ತದೆ” ಎನ್ನುತ್ತಾರೆ ಹರ್ಷ್.
https://www.instagram.com/p/COiDm5-hSJ5/?utm_source=ig_web_copy_link