alex Certify ತಾಯಿಗೆ ತಗುಲಿದ ಕೊರೋನಾ ಸೋಂಕು, ಪುತ್ರನಿಂದಲೇ ಅಮಾನವೀಯ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ತಗುಲಿದ ಕೊರೋನಾ ಸೋಂಕು, ಪುತ್ರನಿಂದಲೇ ಅಮಾನವೀಯ ಕೃತ್ಯ

ವಿಜಯವಾಡ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮಚರ್ಲಾದಲ್ಲಿ ಅಮಾನವೀಯ ಘಟನೆ ನಡೆದಿದೆ. ಕೊರೋನಾ ಸೋಂಕು ತಗುಲಿದ ತಾಯಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಪುತ್ರ ಪರಾರಿಯಾಗಿದ್ದಾನೆ.

ತಾಯಿಯಿಂದ ಮನೆಮಂದಿಗೆ ಸೋಂಕು ಹರಡುತ್ತದೆ ಎಂಬ ಭಯದಲ್ಲಿ 80 ವರ್ಷದ ವೃದ್ಧ ತಾಯಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ.

ಮಚರ್ಲಾ ಬಸ್ ನಿಲ್ದಾಣದಲ್ಲಿ ತಾಯಿಯನ್ನು ಕೂರಿಸಿದ ವೆಂಕಟೇಶ್ವರ ರಾವ್ ಎಂಬಾತ ನೀರು ತರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ವೃದ್ಧೆಯನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ರನ ಅಮಾನವೀಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...