ಪಶ್ಚಿಮ ಬಂಗಾಳದಲ್ಲಿ ರೇಡ್ ಮಾಡುವ ಸಂದರ್ಭದಲ್ಲಿ ಕಲ್ಲುತೂರಾಟಕ್ಕೆ ಗುರಿಯಾದ ಬಿಹಾರ ಮೂಲದ ಠಾಣಾಧಿಕಾರಿಯೊಬ್ಬರು ಮೃತಪಟ್ಟ ಬಳಿಕ ಅವರ ದೇಹವನ್ನು ಕಂಡ ಅವರ ತಾಯಿ ಸ್ಥಳದಲ್ಲೇ ಕುಸಿದು ಪುತ್ರಶೋಕದಲ್ಲಿ ತಾವೂ ಜೀವ ಬಿಟ್ಟಿದ್ದಾರೆ.
ಬಿಹಾರ ಪೂರ್ನಿಯಾ ಜಿಲ್ಲೆಯ ಜಾನಕಿನಗರದವರಾದ ಕಿಶನ್ಗಂಜ್ ಠಾಣಾಧಿಕಾರಿ ಅಶ್ವಿನಿ ಕುಮಾರ್ರನ್ನು ಏಪ್ರಿಲ್ 10ರಂದು ಬಂಗಾಳದ ಗೋಲ್ಪೋಖರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಟಪಾಡಾ ಗ್ರಾಮದಲ್ಲಿ ಕಲ್ಲು ತೂರಿ ಕೊಲ್ಲಲಾಗಿತ್ತು. ಮೋಟರ್ಸೈಕಲ್ ಕಳ್ಳತನದ ಪ್ರಕರಣದ ಸಂಬಂಧ ರೇಡ್ ಮಾಡಲು ಅಶ್ವಿನಿ ಕುಮಾರ್ ಸ್ಥಳಕ್ಕೆ ಧಾವಿಸಿದ್ದರು.
ಮನೆಗೆ ತರಲಾದ ಮಗನ ದೇಹವನ್ನು ಕಂಡ ಕುಮಾರ್ ತಾಯಿ ಊರ್ಮಿಳಾ ದೇವಿ ಸ್ಥಳದಲ್ಲೇ ಕುಸಿದಿದ್ದಾರೆ. ಇವರ ಪೂರ್ವಜರ ಗ್ರಾಮದಲ್ಲಿ ಅಮ್ಮ-ಮಗ ಇಬ್ಬರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಅದಾನಿ ಗ್ರೂಪ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ: ಸೃಷ್ಟಿಯಾಗಲಿದೆ 2,500 ಕ್ಕೂ ಅಧಿಕ ಉದ್ಯೋಗ
ರೇಡ್ಗೆಂದು ಹೋಗಿದ್ದ ಏಳು ಮಂದಿಯ ತಂಡದಲ್ಲಿದ್ದ ಸಿಬ್ಬಂದಿ, ಕುಮಾರ್ ಮೇಲೆ ದಾಳಿಯಾದಾಗ ಸ್ಥಳದಿಂದ ಪರಾರಿಯಾದ ಕಾರಣ, ಸೇವೆಯಿಂದ ಅಮಾನತು ಮಾಡಲಾಗಿದೆ.
ಚುನಾವಣಾ ಕರ್ತವ್ಯದ ಕಾರಣದಿಂದ ಅಶ್ವಿನಿ ಕುಮಾರ್ಗೆ ಪೊಲೀಸ್ ಇಲಾಖೆಯಿಂದ ಸಮರ್ಪಕವಾದ ನೆರವು ಸಿಗಲಿಲ್ಲ ಎಂದು ಕಿಶನ್ಗಂಗ್ ಎಸ್ಪಿ ಕುಮಾರ್ ಆಶಿಶ್ ತಿಳಿಸಿದ್ದಾರೆ. “ಕ್ರಿಮಿನಲ್ ದಂಡ ಸಂಹಿತೆಯ ಪ್ರಕಾರ ಪೊಲೀಸ್ ತಂಡವೊಂದು ಬೇರೊಂದು ಸರಹದ್ದಿನ ಒಳಗೂ ರೇಡ್ ಮಾಡಬಹುದು…..ಆ ಠಾಣೆಯ ಸಿಬ್ಬಂದಿ ನಮಗೆ ನೆರವಾಗಿದ್ದರೆ ನಮ್ಮ ಅಧಿಕಾರಿಯ ಜೀವ ಉಳಿಯುತ್ತಿತ್ತು’’ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.