alex Certify ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ

ಮುಂಬೈ `ವಾಣಿಜ್ಯ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಎಂದೂ ಇದನ್ನು ಕರೆಯಲಾಗುತ್ತದೆ. ಆದ್ರೆ ವಾಣಿಜ್ಯ ನಗರಿ ಮುಂಬೈ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು ದೇವಸ್ಥಾನಗಳಿವೆ.

ಸಿದ್ಧಿವಿನಾಯಕ ದೇವಸ್ಥಾನ ಮುಂಬೈನ ಪ್ರಸಿದ್ಧ ಹಾಗೂ ಸುಂದರ ದೇವಸ್ಥಾನಗಳಲ್ಲಿ ಒಂದು. ಗಣೇಶ ನೆಲೆಸಿರುವ ಈ ದೇವಸ್ಥಾನವನ್ನು ಶ್ರೀಮಂತ ದೇವಸ್ಥಾನ ಎಂದೇ ಕರೆಯಲಾಗುತ್ತದೆ. 1901 ರಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.

ಸಿದ್ಧಿವಿನಾಯಕನ ದರ್ಶನ ಪಡೆದ ಪ್ರವಾಸಿಗರು ಮಹಾಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡದೆ ಬರಲು ಸಾಧ್ಯವಿಲ್ಲ. 1831ರಲ್ಲಿ ನಿರ್ಮಾಣವಾದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಹಾಕಾಳಿ,          ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ಮೂರ್ತಿಗಳಿವೆ.

ಮುಂಬೈನಲ್ಲಿರುವ ಇನ್ನೊಂದು ಪ್ರಸಿದ್ಧ ದೇವಸ್ಥಾನಗಳಲ್ಲಿ ಬಾಬುಲ್ನಾಥ್ ಮಂದಿರವೂ ಒಂದು. ಶಿವನಿಗೆ ಅರ್ಪಿತ ಈ ದೇವಸ್ಥಾನವನ್ನು 1780 ರಲ್ಲಿ ನಿರ್ಮಾಣ ಮಾಡಲಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತದೆ.

6ನೇ ಶತಮಾನದಲ್ಲಿ ನಿರ್ಮಾಣವಾದ ಹಳೆಯ ಮುಂಬಾ ದೇವಿ ದೇವಸ್ಥಾನವೂ ಮುಂಬೈನಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು.

ಮುಂಬೈನ ವಾಲಕೇಶ್ವರ ದೇವಸ್ಥಾನ ಕೂಡ ಐತಿಹಾಸಿಕ ದೇವಾಲಯಗಳಲ್ಲಿ ಒಂದು. ದಕ್ಷಿಣ ಮುಂಬೈನ ಅತಿ ಎತ್ತರದ ಪ್ರದೇಶದಲ್ಲಿ ಈ ದೇವಸ್ಥಾನವಿದೆ.

ವೈಷ್ಣೋದೇವಿ ದೇವಾಲಯವು ಮುಂಬೈನ ಮಲಾಡ್ ನಲ್ಲಿದೆ. ಕೃತಕ ಗುಹೆ ಹಾಗೂ ದೇವಾಲಯದ ವಾಸ್ತುಶಿಲ್ಪ ಪ್ರವಾಸಿಗರಿಗೆ ಸ್ಮರಣೀಯ ಅನುಭವ ನೀಡುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...