ದೇಶದಲ್ಲಿ ಈವರೆಗೆ 1.28 ಕೋಟಿ ಜನರನ್ನು ಕೊರೊನಾ ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಚಂದ್ರ ಖುಂಟಿಯಾ ಹೇಳಿದ್ದಾರೆ. ಈ ಪಾಲಿಸಿಯ ಪ್ರೀಮಿಯಂ ಗಳಿಕೆ ಒಂದು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಸುಭಾಷ್ ಚಂದ್ರ ಹೇಳಿದ್ದಾರೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯ 3369 ಹುದ್ದೆಗಳಿಗೆ ನೇಮಕಾತಿ
ಕೊರೊನಾ ಸಂದರ್ಭದಲ್ಲಿ ಐಆರ್ಡಿಎ ಸೂಚನೆ ಮೇರೆಗೆ ವಿಮಾ ಕಂಪನಿಗಳು ಎರಡು ವಿಮೆ ಯೋಜನೆಯನ್ನು ಶುರು ಮಾಡಿವೆ. ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕ್ ಎಂದ ಎರಡು ವಿಮೆ ಯೋಜನೆಯನ್ನು ಪರಿಚಯಿಸಿವೆ. ಅಲ್ಲದೆ ಕೊರೊನಾ ವ್ಯಾಪ್ತಿಗೆ ಯಾವ ಯಾವ ಪಾಲಿಸಿಗಳು ಬರುತ್ತವೆ ಎಂಬುದರ ಮಾಹಿತಿ ನೀಡಿದ್ದವು.
ಕೊರೊನಾ ಕವಚದಡಿ 42 ಲಕ್ಷ ಜನರಿಗೆ ರಕ್ಷಣೆ ನೀಡಲಾಗಿದೆ. ಕೊರೊನಾ ರಕ್ಷಕ್ ಅಡಿಯಲ್ಲಿ 5.36 ಲಕ್ಷ ಜನರಿಗೆ ರಕ್ಷಣೆ ಸಿಕ್ಕಿದೆ. ಈ ಎಲ್ಲ ಯೋಜನೆಯಡಿ ಒಟ್ಟು 1.28 ಕೋಟಿ ಜನರಿಗೆ ರಕ್ಷಣೆ ಸಿಕ್ಕಿದೆ ಎಂದು ಖುಂಟಿಯಾ ಹೇಳಿದ್ದಾರೆ. ಇವೆಲ್ಲದರ ಪ್ರೀಮಿಯಂ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಎಂದು ಅವರು ಹೇಳಿದ್ದಾರೆ.
ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡುತ್ತೆ LICಯ ಈ ಯೋಜನೆ
ಸಾಂಕ್ರಾಮಿಕ ರೋಗದ ನಂತ್ರ ಏಜೆಂಟರು ಹಾಗೂ ವಿಮಾ ಕಂಪನಿಗಳಿಗೆ ಸಾಕಷ್ಟು ಅವಕಾಶ ಸಿಕ್ಕಿದೆ. ಜನರಿಗೆ ಈ ಸಂದರ್ಭದಲ್ಲಿ ವಿಮೆ ಎಷ್ಟು ಮಹತ್ವದ್ದು ಎಂಬುದು ಗೊತ್ತಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮಾಡ್ತಿರುವ ನಿರಂತರ ಪ್ರಯತ್ನ ಸಂತೋಷ ನೀಡಿದೆ ಎಂದು ಖುಂಟಿಯಾ ಹೇಳಿದ್ದಾರೆ.