ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದೆ. ಕೊರೊನಾ ಲಸಿಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಿದೆ ಎಂಬ ಸುದ್ದಿಯೂ ಇದೆ. ಭಾನುವಾರ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಸಾವನ್ನಪ್ಪಿದ ಆಸ್ಪತ್ರೆ ವಾರ್ಡ್ ಬಾಯ್ ಕೂಡ ಕೊರೊನಾ ಲಸಿಕೆಯಿಂದ ಸಾವನ್ನಪ್ಪಿದ್ದಾನೆಂಬ ಆರೋಪವಿತ್ತು. ಆದ್ರೀಗ ಇದಕ್ಕೆ ತೆರೆ ಬಿದ್ದಿದೆ.
ಭಾನುವಾರ ಏಕಾಏಕಿ ಸಾವನ್ನಪ್ಪಿದ್ದ ಮೊರಾದಾಬಾದ್ ಜಿಲ್ಲಾ ಆಸ್ಪತ್ರೆ ವಾರ್ಡ್ ಬಾಯ್ ಮಹಿಪಾಲ್ ಸಿಂಗ್ ಜನವರಿ 16ರಂದು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಇದೇ ಆತನ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಮಹಿಪಾಲ್ ಸಾವು ಕೊರೊನಾ ಲಸಿಕೆಯಿಂದ ಅಲ್ಲ ಹೃದಯಾಘಾತದಿಂದ ಎಂಬುದು ಗೊತ್ತಾಗಿದೆ.
ಕೊರೊನಾ ಲಸಿಕೆಯಿಂದ ಸಾವನ್ನಪ್ಪಿದ್ದಾರೆಂದು ವದಂತಿ ಹಬ್ಬಿಸಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಜನವರಿ 16ರಂದು 46 ವರ್ಷದ ಮಹಿಪಾಲ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ. ಭಾನುವಾರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ತರುವ ಮೊದಲೇ ಮಹಿಪಾಲ್ ಸಾವನ್ನಪ್ಪಿದ್ದಾನೆ. ಮೊರಾದಾಬಾದ್ ನಲ್ಲಿ 479 ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಹಾಕಲಾಗಿದೆ.