alex Certify ಕೊರೊನಾದಿಂದ ಮೃತಪಟ್ಟ 2 ತಿಂಗಳ ಬಳಿಕ ಬಂತು ನೆಗೆಟಿವ್​ ರಿಪೋರ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಮೃತಪಟ್ಟ 2 ತಿಂಗಳ ಬಳಿಕ ಬಂತು ನೆಗೆಟಿವ್​ ರಿಪೋರ್ಟ್…!

ಕೋವಿಡ್​​ನಿಂದ ಪತಿ ಮೃತರಾದ 2 ತಿಂಗಳ ಬಳಿಕ ಪತಿಯ ಮೊಬೈಲ್​ಗೆ ಬಂದ ಮೆಸೇಜ್​ನ್ನ ಕಂಡು ಪಟಿಯಾಲ ಗ್ರಾಮದ ನಿವಾಸಿ ಹೌಹಾರಿದ್ದಾರೆ.

ಅಕ್ಟೋಬರ್​ 31ರಂದು ಪಟಿಯಾಲ ಗ್ರಾಮದ ನಿವಾಸಿ ಸೋನಿಯಾರ ಪತಿ ಸಲೀಮ್​ ಖಾನ್ (35) ಅಂಬಾಲಾದ ಮಿಷನ್​ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತರಾದರು. ಆದರೆ ಡಿಸೆಂಬರ್​ 2ನೇ ತಾರೀಖಿನಿಂದು ಪತಿಯ ಮೊಬೈಲ್​​ಗೆ ಸಲೀಂ ಖಾನ್​ (ಐಡಿ: 03041252464)ರ ಸ್ವ್ಯಾಬ್​ ಮಾದರಿ ಸಂಗ್ರಹಿಸಲಾಗಿದ್ದು ಪರೀಕ್ಷಾ ವರದಿ ಲಭ್ಯವಾಗುವವರೆಗೆ ನಿಮ್ಮನ್ನ ಪ್ರತ್ಯೇಕಿಸಲು ಸೂಚಿಸಲಾಗಿದೆ ಎಂಬ ಮೆಸೇಜ್​ ಬಂದಿದೆ.

ಈ ಸಂದೇಶ ನೋಡಿದ ಬಳಿಕ ಸೋನಿಯಾ ಆಘಾತಕ್ಕೊಳಗಾಗಿದ್ದರು. ಆದರೆ ಈ ಮೆಸೇಜ್​ ಬಂದ ಆರು ಗಂಟೆಗಳ ಬಳಿಕ ಸಲೀಮ್​ ಖಾನ್​​ ಆಂಟಿಜನ್​ ಸ್ಯಾಂಪಲ್​ ವರದಿ ನೆಗೆಟಿವ್​ ಬಂದಿದೆ ಎಂಬ ಇನ್ನೊಂದು ಸಂದೇಶ ಬಂದಿದೆ.

ಪಟಿಯಾಲದ ಪ್ರಯೋಗಾಲಯದಲ್ಲಿ ಸಲೀಮ್​ ಖಾನ್​ರ ಆಂಟಿಜನ್​ ಮಾದರಿ ಪರೀಕ್ಷೆಗೆ ಒಳಪಟ್ಟಿತ್ತು. ನನ್ನ ಪತಿ ಅಕ್ಟೋಬರ್​ನಲ್ಲೇ ನಿಧನರಾಗಿದ್ದಾರೆ. ಆದರೆ ಡಿಸೆಂಬರ್​ನಲ್ಲಿ ನನ್ನ ಪತಿಗೆ ಕೋವಿಡ್​ ಇರಲೇ ಇಲ್ಲ ಎಂದು ಸರ್ಕಾರ ಸಂದೇಶ ಕಳುಹಿಸಿದೆ. ಏನಿದರ ಅರ್ಥ ಎಂದು ಸೋನಿಯಾ ಪ್ರಶ್ನೆ ಮಾಡಿದ್ದಾರೆ.

ಸೋನಿಯಾ ಈ ಸಂದೇಶವನ್ನ ಕುಟುಂಬಸ್ಥರಿಗೆ ಶೇರ್​ ಮಾಡಿದ್ದಾರೆ. ಅದರಲ್ಲಿದ್ದ ಲಿಂಕ್​ನ್ನ ತೆರೆದು ನೋಡಿದ ವೇಳೆ ಅದರಲ್ಲಿ ಸಲೀಂ ಖಾನ್​ ಮನೆ ವಿಳಾಸ ತಪ್ಪಾಗಿ ನಮೂದಾಗಿತ್ತು. ಹೀಗಾಗಿ ಬೇರೆ ಯಾರಿಗೂ ಹೋಗಬೇಕಾದ ಸಂದೇಶ ತಪ್ಪಾಗಿ ಸೋನಿಯಾ ಪತಿ ನಂಬರ್​ಗೆ ಕಳುಹಿಸಿದ್ದಿರಬಹುದು ಎಂದು ಕುಟುಂಬಸ್ಥರು ಸಂದೇಹ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...