ಕೃಷಿಕರೇ ಗಮನಿಸಿ: ಈ ವರ್ಷದ ಮುಂಗಾರಿನ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ 16-04-2021 4:38PM IST / No Comments / Posted In: Latest News, India ನೈಋತ್ಯ ಮಾನ್ಸೂನ್ ಜೂನ್ ತಿಂಗಳ ಹೊತ್ತಿಗೆ ಸಹಜ ಸ್ಥಿತಿಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್ನ ಕಾಲದಲ್ಲಿ ( ಜೂನ್ – ಸೆಪ್ಟೆಂಬರ್ ) ದೇಶಾದ್ಯಂತ 96 ರಿಂದ 104 ಪ್ರತಿಶತದಷ್ಟು ಸರಾಸರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗೆ ನಾಲ್ಕು ತಿಂಗಳ ದೀರ್ಘಾವದಿ ಮಳೆಗಾಲ ಇರಲಿದೆ ಎಂದು ಮಾಹಿತಿ ನೀಡಿದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್, ಎಲ್ಪಿಎ 98 ಪ್ರತಿಶತದಷ್ಟು ಮಳೆಯಾಗಲಿದೆ. ಇದು ದೇಶಕ್ಕೆ ನಿಜವಾಗಿಯೂ ಒಳ್ಳೆಯ ಸುದ್ದಿಯಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಹೇಳಿದ್ರು. ಈ ಒಳ್ಳೆಯ ಮಳೆಯಿಂದಾಗಿ ಕೃಷಿ ಸಂಬಂಧಿ ಆರ್ಥಿಕ ವಲಯ ಕೂಡ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.