ಅಹಮದಾಬಾದ್‌ನಲ್ಲಿ ದೇಶದ ಮೊದಲ ಏಕಶಿಲಾ ರಚನೆಯೊಂದು ಪತ್ತೆಯಾಗಿದೆ. ಇಲ್ಲಿನ ಥಟ್ಲೇಜ್‌ನಲ್ಲಿರುವ ವನೋದ್ಯಾನದಲ್ಲಿ ಈ ರಚನೆ ಕಾಣಿಸಿದೆ.
ಹೊಳೆಯುವ ಲೋಹದ ಶೀಟ್ ಗಳನ್ನು ಹೊಂದಿರುವ ಈ ಏಕಶಿಲಾ ರಚನೆಯು ತ್ರಿಕೋನಾಕೃತಿಯಲ್ಲಿದೆ. ಶಿಲೆಯ ಮೇಲೆ ಕೆಲವೊಂದು ಸಂಖ್ಯೆಗಳನ್ನು ಕೆತ್ತಲಾಗಿದ್ದು, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಸಂದೇಶವನ್ನು ಈ ಶಿಲೆಯ ಮೇಲೆ ಕೆತ್ತಲಾಗಿದೆ.
ಈ ವನೋದ್ಯಾನವನ್ನು ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಈ ರಚನೆಯನ್ನು ನಿರ್ಮಿಸಿದ್ದಾರೆ. ವನೋದ್ಯಾನವನ್ನು ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಉದ್ಘಾಟಿಸಿದ್ದರು.