ಇಡೀ ಜಗತ್ತಿನಲ್ಲಿ ಅತಿಹೆಚ್ಚು ಪ್ರೀತಿಸುವ ಅಥವಾ ವಾತ್ಸಲ್ಯಪೂರ್ಣವಾಗಿರುವ ಸಂಬಂಧವೆಂದರೆ ಅದು ಮಾತೃಪ್ರೀತಿ. ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಅದಕ್ಕೆ ಈ ವಿಡಿಯೋ ಮತ್ತೊಮ್ಮೆ ಸಾಕ್ಷಿಯಾಗಿದೆ.
ಹೌದು, ಆದರೆ ಈ ವಿಡಿಯೋ ಮನುಷ್ಯರ ಪ್ರೀತಿಯ ಬಗ್ಗೆಯಲ್ಲ. ಬದಲಿಗೆ ಆನೆಯ ಪ್ರೀತಿಯ ಬಗ್ಗೆ. ತಾಯಿ ಆನೆ ತನ್ನ ಮರಿಯಾನೆಗೆ ಮೊದಲ ಹೆಜ್ಜೆಯನ್ನು ಇಡುವ ಬಗ್ಗೆ ಹೇಳಿಕೊಡುತ್ತಿದೆ. ಕೇವಲ ಮೊದಲ ಹೆಜ್ಜೆಗೆ ಸಹಾಯ ಮಾಡುವುದು ಮಾತ್ರವಲ್ಲದೇ, ಮರಿಯಾನೆ ನಡೆಯುವುದಕ್ಕೆ ಅಡ್ಡ ಬರುತ್ತಿರುವ ಕಡ್ಡಿ ಕಸವನ್ನು ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತಾ ನಂದಾ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ, ಈ ದೃಶ್ಯ ಸೆರೆಯಾಗಿದ್ದು ಇದೀಗ ಭಾರಿ ವೈರಲ್ ಆಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ನೂರಾರು ಕಾಮೆಂಟ್‌ಗಳು ಬಂದಿವೆ. ನೆಟ್ಟಿಗರು ಆನೆಯ ಮಾತೃಪ್ರೀತಿಗೆ ಶಹಬಾಸ್‌ಗಿರಿ ನೀಡಿದ್ದಾರೆ.
https://twitter.com/susantananda3/status/1271340740530941952?ref_src=twsrc%5Etfw%7Ctwcamp%5Etweetembed%7Ctwterm%5E1271340740530941952&ref_url=https%3A%2F%2Fwww.timesnownews.com%2Fthe-buzz%2Farticle%2Fmommy-elephant-helps-her-child-take-baby-steps-removes-obstacles-from-the-way-watch%2F605776