ಗ್ರಾಮೀಣ ಪ್ರದೇಶದ ಜನರಿಗೊಂದು ಖುಷಿ ಸುದ್ದಿಯಿದೆ. ಇನ್ಮುಂದೆ ವಿದ್ಯುತ್ ಬಲ್ಬ್ ಖರೀದಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿಲ್ಲ. ಭಾರತದ ಎನರ್ಜಿ ಎಫಿಶಿಯಂಟ್ ಸರ್ವೀಸಸ್ ಲಿಮಿಟೆಡ್, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಬಲ್ಬ್ ಗೆ 10 ರೂಪಾಯಿಯಂತೆ ಸುಮಾರು 60 ಕೋಟಿ ಬಲ್ಬ್ ಗಳನ್ನು ನೀಡಲು ನಿರ್ಧರಿಸಿದೆ.
ಅಂದ್ರೆ ಗ್ರಾಮೀಣ ಪ್ರದೇಶದ ಜನರಿಗೆ 70 ರೂಪಾಯಿ ಬೆಲೆಯ ಬಲ್ಬ್ 10 ರೂಪಾಯಿಗೆ ಸಿಗಲಿದೆ. ಇಇಎಸ್ಎಲ್ ಇದನ್ನು ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಲು ಮಾಡ್ತಿದೆ. ಗ್ರಾಮ ಉಜಾಲಾ ಯೋಜನೆಗೂ ಇದು ಉತ್ತೇಜನ ನೀಡಲಿದೆ. ಇದು ಸಬ್ಸಿಡಿ ರಹಿತ ಹಾಗೂ ಸರ್ಕಾರದ ಸಹಾಯವಿಲ್ಲದೆ ಮಾಡಲು ಯೋಜಿಸಲಾಗಿದೆ.
ಇಇಎಸ್ಎಲ್ ಪ್ರಸ್ತುತ ವಿಶ್ವದ ಅತಿದೊಡ್ಡ ಲೈಟಿಂಗ್ ಪ್ರೋಗ್ರಾಂ ನಡೆಸುತ್ತಿದೆ. ಸರ್ಕಾರದ ಉಜಾಲಾ ಯೋಜನೆಯಡಿ 2014 ರಲ್ಲಿ 310 ರೂಪಾಯಿಗಳಿಗೆ ಮಾರಾಟವಾದ ಎಲ್‌ಇಡಿ ಬಲ್ಬ್ ಈಗ 70 ರೂಪಾಯಿಗೆ ಸಿಗ್ತಿದೆ. ಆದರೆ ಈಗ ಗ್ರಾಮೀಣ ಪ್ರದೇಶದ ಜನರು ಈ ಬಲ್ಬ್ ನ್ನು 10 ರೂಪಾಯಿಗೆ ಖರೀದಿಸಬಹುದಾಗಿದೆ.