
ಈತ ಏಣಿ ಹತ್ತಿ, ಬಸ್ಸಿನ ಮೇಲ್ಭಾಗದವರೆಗೂ ಏರಬಲ್ಲ. ಇದರಲ್ಲೇನು ವಿಶೇಷವಿದೆ ಅಲ್ಲವೇ ? ಎಲ್ಲರೂ ಏಣಿ ಹತ್ತಿ ಬಸ್ಸನ್ನೇನು ? ಎಷ್ಟು ಎತ್ತರದ ಜಾಗವನ್ನೂ ತಲುಪಬಲ್ಲರು ಅಲ್ಲವೇ ?
ಆದರೆ, ಈತ ತಾನೊಬ್ಬನೇ ಹತ್ತುವುದಿಲ್ಲ. ತಲೆಯ ಮೇಲೆ ಮಣಭಾರದ ಬೈಕ್ ನ್ನು ಹೊತ್ತುಕೊಂಡು ಬೇರಾವುದೇ ಸಹಾಯವಿಲ್ಲದೆಯೇ ಏಣಿ ಏರಬಲ್ಲ ಭೂಪ ಈ ಆಧುನಿಕ ಬಾಹುಬಲಿ.
ಬಾಹುಬಲಿಯನ್ನು ಸಿನಿಮಾದಲ್ಲಿ ನೋಡಿದ್ದೆವು. ಆದರೆ, ಈ ನಿಜದ ಬಾಹುಬಲಿ ಇರುವುದು ನಮ್ಮದೇ ದೇಶದಲ್ಲಿ. ಯಾವ ಬಾಹುಬಲಿಗೂ ಕಡಿಮೆ ಇಲ್ಲದಂತಹ ಸಾಧನೆ ಇದು.
ಹೀಗೆ ಬೈಕ್ ನ್ನು ತಲೆ ಮೇಲೆ ಹೊತ್ತು, ಏಣಿ ಏರಿ ಬಸ್ಸಿನ ಮೇಲೆ ಇಳಿಸುವ ಈತನ ಸಾಹಸವೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಜಿಷ್ಣು ಎಂಬಾತನ ಪೋಸ್ಟ್ ಗೆ ಹಲವಾರು ಕಮೆಂಟ್ ಗಳೂ ಬಂದಿವೆ.
ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಹೀಗೆ ಹೊತ್ತೊಯ್ಯುವುದು ಸರಿಯಲ್ಲ ಎಂದೂ ಅನೇಕರು ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಸ್ ನಿಲ್ದಾಣದಲ್ಲಿ ಇದು ಹೊಸತೇನಲ್ಲ. ಹಲವಾರು ವರ್ಷದಿಂದ ಇಷ್ಟೇ ಸರಾಗವಾಗಿ ವಸ್ತುಗಳನ್ನ ಬಸ್ಸಿನ ಮೇಲಕ್ಕೇರಿಸಲಾಗುತ್ತದೆ.