alex Certify ರೈತರ ಪ್ರತಿಭಟನಾ ಸ್ಥಳದಲ್ಲೇ ಸ್ಥಾಪನೆಯಾಯ್ತು ಸಿಖ್​ ಮೊಬೈಲ್​ ಮ್ಯೂಸಿಯಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಪ್ರತಿಭಟನಾ ಸ್ಥಳದಲ್ಲೇ ಸ್ಥಾಪನೆಯಾಯ್ತು ಸಿಖ್​ ಮೊಬೈಲ್​ ಮ್ಯೂಸಿಯಂ

ಕೃಷಿ ಮಸೂದೆ ವಿರೋಧಿಸಿ ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗದ ರೈತರು ಕಳೆದ ವರ್ಷ ನವೆಂಬರ್​ನಿಂದ ಸಿಂಗು ಗಡಿ, ಟಿಕ್ರಿ, ಘಾಜಿಪುರ, ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ವಿರುದ್ಧದ ಹೋರಾಟ 2 ತಿಂಗಳು ಪೂರೈಸುತ್ತಾ ಬಂದಿದ್ದು ತಮ್ಮ ಪ್ರತಿಭಟನಾ ಸ್ಥಳವನ್ನೇ ಪುಟ್ಟ ಪಟ್ಟಣ ಮಾಡಿಕೊಂಡಿರುವ ರೈತ ಹೋರಾಟಗಾರರು ಲೈಬ್ರರಿ, ಲಾಂಡ್ರಿ, ಮಸಾಜ್​ ಸ್ಪಾ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಇದೀಗ ಸಿಖ್​ ಇತಿಹಾಸವನ್ನ ಸಾರುವ ಮೊಬೈಲ್​ ಮ್ಯೂಸಿಯಂನ್ನು ಮೊಹಾಲಿಯಿಂದ ಸಿಂಗು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ತರಲಾಗಿದೆ. ಮೊಹಾಲಿ ನಿವಾಸಿ ಪರ್ವೀಂದರ್​ ಸಿಂಗ್​ ಎಂಬವರಿಗೆ ಸೇರಿದ ಮೊಬೈಲ್​ ಮ್ಯೂಸಿಯಂ ಇದಾಗಿದೆ. ಸಿಖ್​ ಧರ್ಮದ ಇತಿಹಾಸದ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಲಿ ಅಂತಾ ಈ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದೇನೆ ಅಂತಾರೆ ಪರ್ವೀಂದರ್​ ಸಿಂಗ್​.

ಏತನ್ಮಧ್ಯೆ ಸದ್ಯ ವಿವಾದಿತ ಕೃಷಿ ಮಸೂದೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಇಂತಹ ಪರಿಸ್ಥಿತಿಯಲ್ಲಿ ರೈತರು ಹೋರಾಟ ಮಾಡೋದನ್ನ ನೋಡುತ್ತಾ ಕೂರೋದು ಸರಿಯಲ್ಲ. ಹೀಗಾಗಿ ಈ ಕೂಡಲೇ ಕೃಷಿ ಮಸೂದೆ ವಾಪಸ್​ ಪಡೆಯುವಂತೆ ಸುಪ್ರೀಂ ಕೋರ್ಟ್​ ಕೇಂದ್ರಕ್ಕೆ ಸೂಚನೆ ನೀಡಿದೆ. ಮಾತ್ರವಲ್ಲದೇ ಈ ಮಸೂದೆಯ ಬಗೆಗಿನ ಚರ್ಚೆಗೆ ಸಮಿತಿ ರಚನೆಗೆ ಮುಂದಾಗಿದ್ದು ಇದರಲ್ಲಿ ರೈತರನ್ನೂ ಸದಸ್ಯರನ್ನಾಗಿ ಮಾಡುವ ಇರಾದೆ ಹೊಂದಿತ್ತು.

ಆದರೆ ರೈತ ಸಂಘಟನೆಗಳು ತಾವು ಯಾವುದೇ ಸಂಘಟನೆಗಳಲ್ಲಿ ಭಾಗಿಯಾಗೋದಿಲ್ಲ. ಕೃಷಿ ಮಸೂದೆ ವಾಪಸ್​ ಪಡೆಯುವವರೆಗೂ ನಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟನೆ ನೀಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...