ಮಿಜೊರಾಂನ ದಂಪತಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ವಿಚಿತ್ರ ಮಾರ್ಗವೊಂದನ್ನ ಹುಡುಕಿದ್ದು ವೈರಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
ಮಿಜೋರಾಂನ ಬಾಂಗ್‌ಕಾವ್ನ್ ನ ನಿವಾಸಿಯಾದ ಮಹಿಳೆಯೊಬ್ಬಳು ಕೋವಿಡ್ ಸೋಂಕಿಗೆ ಒಳಗಾಗಿದ್ದಳು. ಆಕೆಯ ಪತಿ ಕೊರೊನಾದ ಮಾರ್ಗಸೂಚಿಗಳನ್ನ ಪಾಲಿಸುತ್ತಾ ಆಕೆಯನ್ನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾನೆ.
ಕೊರೊನಾದ ಮಾರ್ಗಸೂಚಿಯಂತೆ ದಂಪತಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಲು ನಿರ್ಧರಿಸಿದ್ದಾರೆ. ಜೀಪ್ನ ಹಿಂಭಾಗಕ್ಕೆ ಟ್ರೇಲರ್ನ್ನು ಜೋಡಿಸಲಾಗಿತ್ತು. ಟ್ರೇಲರ್ನ ಮೇಲೆ ನೀಲಿ ಬಣ್ಣದ ಖುರ್ಚಿಯನ್ನ ಇಡಲಾಗಿತ್ತು. ಪತಿ ಜೀಪನ್ನ ಚಲಾಯಿಸಿದ್ರೆ ಪತ್ನಿ ಹಿಂದಿನ ನೀಲಿ ಬಣ್ಣದ ಕುರ್ಚಿ ಮೇಲೆ ಕುಳಿತಿದ್ದಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ಫನ್ನಿ ಕಮೆಂಟ್ಗಳ ಜೊತೆಯಲ್ಲಿ ನೆಟ್ಟಿಗರು ಮಹಿಳೆ ಬೇಗನೆ ಕೊರೊನಾದಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
https://www.facebook.com/auztynn.shimray.9/videos/544354626972381/?t=0