alex Certify ಕಡಿಮೆ ನೀರನ್ನ ಬಳಸಿ ಶೌಚಾಲಯ ಸ್ವಚ್ಛ ಮಾಡುವ ಸಾಧನ ಕಂಡುಹಿಡಿದ ವಿದ್ಯಾರ್ಥಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ನೀರನ್ನ ಬಳಸಿ ಶೌಚಾಲಯ ಸ್ವಚ್ಛ ಮಾಡುವ ಸಾಧನ ಕಂಡುಹಿಡಿದ ವಿದ್ಯಾರ್ಥಿಗಳು..!

ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ನೀರನ್ನ ಎಷ್ಟು ಮಿತವಾಗಿ ಬಳಕೆ ಮಾಡಿದರೂ ಸಹ ಅದು ಕಡಿಮೆಯೇ. ಭಾರತದಲ್ಲಂತೂ ಬೇಸಿಗೆ ಬಂತು ಅಂದರೆ ಸಾಕು ಬಹುತೇಕ ಎಲ್ಲೆಡೆ ಬರಗಾಲದ ಬಗ್ಗೆಯೇ ಮಾತು.

ಇದೇ ವಿಚಾರವನ್ನ ಗಮನದಲ್ಲಿಟ್ಟುಕೊಂಡು ಹಿಮಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಸೇರಿ ಶೌಚಾಲಯಗಳನ್ನ ಸ್ವಚ್ಛ ಮಾಡೋಕೆ ಹೊಸ ಮಾರ್ಗವೊಂದನ್ನ ಹುಡುಕಿದ್ದಾರೆ. ಈ ಅನ್ವೇಷಣೆಗಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ.

ಕಾರ್ತಿಕ್​ ಧೀಮನ್​ ಹಾಗೂ ವಿನಾಯಕ್ ರಾಣಾ ಈ ಸಾಧನೆ ಮಾಡಿದ ವಿದ್ಯಾರ್ಥಿಗಳು. ಇವರ ಈ ಸಾಧನೆಗೆ ಫೆಬ್ರವರಿ 14ರಂದು ದೆಹಲಿಯಲ್ಲಿ ಮಾನಕ್​ ಪ್ರಶಸ್ತಿ ಕೂಡ ಲಭಿಸಲಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಕ್ಕೆ ಹೋದಾಗ ಅನಗತ್ಯವಾಗಿ ನೀರನ್ನ ವ್ಯರ್ಥ ಮಾಡುತ್ತಿರೋದನ್ನ ಕಂಡ ವಿದ್ಯಾರ್ಥಿಗಳು ಈ ಪ್ಲಾನ್​ ಮಾಡಿದ್ದಾರೆ. ಈ ಹೊಸ ಸಾಧನದಲ್ಲಿ ಬ್ರಶ್​ಗಳನ್ನ ಅಳವಡಿಸಲಾಗಿದ್ದು ನೀರನ್ನ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿ ಶೌಚಾಲಯವನ್ನ ಶುದ್ಧ ಮಾಡಬಹುದಾಗಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...