alex Certify ಕೊರೊನಾ ನಡುವೆಯೂ ಅತಿಥಿಗಳಿಗೆ ವಿಶಿಷ್ಟ ರೀತಿಯಲ್ಲಿ ಮಗನ ಮದುವೆ ಊಟ ಹಾಕಿಸಿದ ತಂದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆಯೂ ಅತಿಥಿಗಳಿಗೆ ವಿಶಿಷ್ಟ ರೀತಿಯಲ್ಲಿ ಮಗನ ಮದುವೆ ಊಟ ಹಾಕಿಸಿದ ತಂದೆ…!

ಮದುವೆ ಅಂದರೆ ಸಾಕು ಸಂಭ್ರಮಗಳ ಜೊತೆಗೆ ನೆನಪಾಗೋದೇ ಅದ್ಧೂರಿ ಭೋಜನ. ಆದರೆ ಕೊರೊನಾದಿಂದಾಗಿ ಭರ್ಜರಿ ವಿವಾಹ ಸಮಾರಂಭಕ್ಕೆ ಬ್ರೇಕ್​ ಬಿದ್ದಿದೆ. ದೂರದಿಂದಲೇ ನವಜೋಡಿಗೆ ಶುಭ ಹಾರೈಸಬೇಕಾದ ಈ ಅನಿವಾರ್ಯ ಸಂದರ್ಭದಲ್ಲಿ ಅನೇಕರು ಮದುವೆ ಊಟವನ್ನ ಮಿಸ್​ ಮಾಡಿಕೊಳ್ತಿರೋದಂತೂ ನೂರಕ್ಕೆ ನೂರರಷ್ಟು ಸತ್ಯ.

ಆದರೆ ಚೆನ್ನೈನಲ್ಲಿ ತಂದೆಯೊಬ್ಬ ಕೊರೊನಾ ಸಂದರ್ಭದಲ್ಲೂ ತಮ್ಮ ಪುತ್ರನ ಮದುವೆ ಊಟವನ್ನ ಎಲ್ಲರಿಗೂ ಹಾಕಿಸಬೇಕು ಎಂದು ಹೊಸ ಪ್ಲಾನ್​ ಮಾಡಿದ್ದಾರೆ. ಹಾಗಂತ ಅವರು ಎಲ್ಲರನ್ನ ಮದುವೆ ಹಾಲ್​ಗೆ ಕರೆದು ಸಿಹಿ ಊಟ ಹಾಕಿಸಿಲ್ಲ. ಬದಲಾಗಿ ಅತಿಥಿಗಳ ಮನೆಗೇ ಮದುವೆ ಊಟವನ್ನ ಪಾರ್ಸೆಲ್​ ಮಾಡಿದ್ದಾರೆ.

ಮದುವೆ ಆಮಂತ್ರಣದ ಜೊತೆಗೆ ಮದುವೆ ಊಟ ಕೂಡ ಅತಿಥಿಗಳ ಮನೆಗೆ ತಲುಪಿಸಲಾಗಿದ್ದು ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಡಿಸೆಂಬರ್​ 10ರಂದು ನಮ್ಮ ಪುತ್ರನ ಮದುವೆ ಸಮಾರಂಭದ ಊಟವನ್ನ ನಿಮ್ಮ ಮನೆಗೆ ಕಳುಹಿಸಿಕೊಡಲಿದ್ದೇವೆ ಅದನ್ನ ಸ್ವೀಕರಿಸಿ ಎಂದು ಪ್ರಿಂಟ್​ ಮಾಡಲಾಗಿದೆ. ಅದರಂತೆಯೇ ಸುಮಾರು 700 ಮಂದಿ ಅತಿಥಿಗಳಿಗೆ ಮದುವೆಯ ದಿನ ಸಿಹಿ ಊಟ ಪಾರ್ಸೆಲ್​ ಮಾಡಲಾಗಿದೆ.

ಕಲರ್​ಫುಲ್​ ವ್ಯಾಕ್​​ನಲ್ಲಿ ಒಂದು ದೊಡ್ಡ ಹಾಗೂ ಸಣ್ಣ ಟಿಫಿನ್ ಕ್ಯಾರಿಯರ್​ ಇಡಲಾಗಿದೆ. ಇದರ ಜೊತೆಗೆ ಬಾಳೆಎಲೆಯನ್ನೂ ಪ್ಯಾಕ್​ ಮಾಡಲಾಗಿದೆ. ಇದರಲ್ಲಿ ಸಾಂಬಾರ್, ರಸಂ, ಪಾಯಸ ಹಾಗೂ ಖೀರ್​ ಸೇರಿದಂತೆ ಬರೋಬ್ಬರಿ 12 ಖಾದ್ಯಗಳನ್ನ ಕಳುಹಿಸಿಕೊಡಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...