alex Certify ಗೆಳೆಯನನ್ನು ವಿವಾಹವಾಗಲು ಮತಾಂತರಗೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನನ್ನು ವಿವಾಹವಾಗಲು ಮತಾಂತರಗೊಂಡ ಯುವತಿ

ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ನೋಯ್ಡಾದ ಸೆಕ್ಟರ್​ 20 ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದು ತನ್ನ ಬಾಯ್​ಫ್ರೆಂಡ್​ ಜೊತೆ ಮದುವೆಯಾಗುವ ಸಲುವಾಗಿ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹೇಳಿದ್ದಾಳೆ.

23 ವರ್ಷದ ಈಕೆ 2 ತಿಂಗಳ ಹಿಂದೆ ಸೆಕ್ಟರ್​ 9ರಿಂದ ನಾಪತ್ತೆಯಾಗಿದ್ದಳು. ಮಂಗಳವಾರ ಪೊಲೀಸ್​ ಠಾಣೆಗೆ ಭೇಟಿ ನೀಡಿದ ಯುವತಿ ಈ ಮಾಹಿತಿಯನ್ನ ನೀಡಿದ್ದಾಳೆ.

ನಾನು ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇನೆ. ನಾನು ನನ್ನ ಪತಿಯ ಜೊತೆಯೇ ಇರಲು ಬಯಸುತ್ತೇನೆ ಹಾಗೂ ನನಗೆ ಪೋಷಕರೊಂದಿಗೆ ಬದುಕಲು ಇಷ್ಟವಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾಳೆ.

ತಮ್ಮ ಮಗಳನ್ನ ಅಪಹರಣ ಮಾಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ಪೊಲೀಸ್​ ಠಾಣೆಗೆ ದೂರನ್ನ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಯಾರ ಜೊತೆ ಬದುಕಬೇಕು ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಆಕೆಗೆ ಇದೆ ಎಂದು ಹೇಳಿದೆ.

ಫೆಬ್ರವರಿ 22ರಿಂದ ಮನೆಯಿಂದ ನಾಪತ್ತೆಯಾಗಿದ್ದ ಯುವತಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದಾದ ಬಳಿಕ ಪೊಲೀಸರಿಗೆ ದೂರನ್ನ ನೀಡಿದ್ದರು. ಈ ದಂಪತಿ ಪ್ರಸ್ತುತ ಪ್ರಯಾಗ್​ರಾಜ್​​ನಲ್ಲಿ ವಾಸಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...