ಪ್ರೀತಿ ಚಿಗುರಿದ ಮೇಲೆ ಪ್ರಪಂಚ ಮರೆಯುತ್ತಾರೆ. ಜಾತಿ, ಮತ, ಧರ್ಮ ಮಾತ್ರವಲ್ಲ ಲಿಂಗವನ್ನೂ ಜನರು ಲೆಕ್ಕಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಲಿಂಗಕಾಮಿಗಳ ಪ್ರೀತಿಯ ಸುದ್ದಿ ಹೆಚ್ಚು ಸದ್ದು ಮಾಡ್ತಿದೆ. ಜಾರ್ಖಂಡ್ ನ ಧನಬಾದ್ ನಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
14 ವರ್ಷದ ಹುಡುಗಿಗೆ 13 ವರ್ಷದ ಹುಡುಗಿ ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಮದುವೆಯಾಗಿ ಕುಟುಂಬಸ್ಥರಿಂದ ದೂರವಾಗಿದ್ದರು. ಆದ್ರೆ ಇಬ್ಬರೂ ಅಪ್ರಾಪ್ತೆಯರಾಗಿರುವ ಕಾರಣ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದ ಪೊಲೀಸರು ಇಬ್ಬರನ್ನು ಮನೆಗೆ ಕಳುಹಿಸಿದ್ದಾರೆ. 18 ವರ್ಷ ತುಂಬುವವರೆಗೂ ಕುಟುಂಬಸ್ಥರ ಜೊತೆ ವಾಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಯೋಧರ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರು ಫಿದಾ…!
14 ವರ್ಷದ ಬಾಲಕಿ ತಾನು ಹುಡುಗ ಎನ್ನುತ್ತಿದ್ದಾಳೆ. ಕೂದಲನ್ನು ಕತ್ತರಿಸಿ, ಹುಡುಗರ ರೀತಿ ಜೀವನ ನಡೆಸುತ್ತಿದ್ದಾಳೆ. 13 ವರ್ಷದ ಬಾಲಕಿ ಹುಡುಗಿಯರಂತೆ ಬಟ್ಟೆ ಧರಿಸಿದ್ದಾಳೆ. ಬಾಲ್ಯದಿಂದಲೂ ಪರಿಚಿತರಾಗಿದ್ದ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಬ್ಬರೂ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೆ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ.
ಮಕ್ಕಳ ಈ ಕೆಲಸಕ್ಕೆ ಕೋಪಗೊಂಡ ಪಾಲಕರು, ಹೆಣ್ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಆಸೆ ವ್ಯಕ್ತಪಡಿಸಿದ್ದರು. ಅಪ್ರಾಪ್ತರಾದ ಕಾರಣ ಪೊಲೀಸರು ಕೂಡ ಮನೆಗೆ ಕಳುಹಿಸಲು ಮುಂದಾಗಿದ್ದಾರೆ.