ನವದೆಹಲಿ: ಬಿತ್ತನೆ ಬೀಜಗಳನ್ನು ಒಳಗೊಂಡ ನಿಗೂಢ ಪಾರ್ಸೆಲ್ ಗಳು ಗೊತ್ತಿಲ್ಲದ ಮೂಲಗಳಿಂದ ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಕೃಷಿ ಮಂತ್ರಾಲಯ ಮಾಹಿತಿ ನೀಡಿದೆ.
ಕೃಷಿ ಮಂತ್ರಾಲಯ ವತಿಯಿಂದ ಎಲ್ಲಾ ರಾಜ್ಯ ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು, ಐಸಿಎಂಆರ್, ಸಂಶೋಧನಾ ಕೇಂದ್ರಗಳಿಗೆ ಮತ್ತು ಬೀಜೋತ್ಪಾದನಾ ಸಂಘ-ಸಂಸ್ಥೆಗಳಿಗೆ ಈ ಕುರಿತು ಮಹತ್ವದ ಸೂಚನೆ ನೀಡಲಾಗಿದೆ.
ಅನೇಕ ದೇಶಗಳಿಗೆ ಅನುಮಾನಾಸ್ಪದ ಪಾರ್ಸೆಲ್ ಗಳು ತಲುಪಿರುವ ವರದಿ ಬಂದಿದೆ. ಇವುಗಳ ಮೂಲಕ ಕೃಷಿ, ಪರಿಸರಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ಜೊತೆಗೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ರೋಗಕಾರಕಗಳನ್ನು ಇಂತಹ ಪಾರ್ಸಲ್ ಗಳ ಮೂಲಕ ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.
ಕೃಷಿ ಸಚಿವಾಲಯ ಈ ಕುರಿತಾಗಿ ಎಚ್ಚರಿಕೆ ನೀಡಿದ್ದು, ಜೈವಿಕ ಯುದ್ಧದ ಭಾಗವಾಗಿ ದುಷ್ಕೃತ್ಯಕ್ಕೆ ಸಂಚು ನಡೆಸಿರಬಹುದೆಂದು ಆತಂಕ ವ್ಯಕ್ತಪಡಿಸಲಾಗಿದೆ. ಬಿತ್ತನೆ ಬೀಜಗಳನ್ನು ಒಳಗೊಂಡ ನಿಗೂಢ ಪಾರ್ಸೆಲ್ ಗಳ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.