ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಪೂರ್ಣವಾದರೂ, ಅದಕ್ಕೆ ಸಂಬಂಧಿಸಿದ ಸುದ್ದಿಗಳು ಮಾತ್ರ ನಿಂತಿಲ್ಲ.
ಇದೀಗ ಭೂಮಿಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಶ್ರೀರಾಮ ಆಶೀರ್ವಾದ ಮಾಡುತ್ತಿರುವ ರೀತಿಯ ಮಿನಿಯೇಚರ್ ಕಲೆ ಭಾರಿ ವೈರಲ್ ಆಗುತ್ತಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಾಂಗ್ಲಿ ಅವರು ಚಾಕ್‌ಪೀಸ್‌ನಲ್ಲಿ ಈ ಕಲೆಯನ್ನು ಮೂಡಿಸಿದ್ದಾರೆ. ಕಳೆದ 15 ವರ್ಷದಿಂದ ಈ ಕಲೆಯನ್ನು ಮೈಗೂಡಿಸಿಕೊಂಡಿರುವ ಸಚಿನ್ ಈಗಾಗಲೇ 200ಕ್ಕೂ ಅಧಿಕ ಮಿನಿಯೇಚರ್ ಕಲೆಯನ್ನು ಬರೆದಿದ್ದಾರೆ.
ಈ ಕಲೆಗೆ ಚಾಲ್ಕ್ ಕೃತಿ ಎಂದು ಹೆಸರಿಟ್ಟಿರುವ ಅವರು, ರಜನಿಕಾಂತ್, ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರನ್ನು ಚಾಕ್‌ಪೀಸ್‌ನಲ್ಲಿ ಮೂಡಿಸಿದ್ದಾರೆ.
ಇದೀಗ ಅಯೋಧ್ಯೆ ಭೂಮಿಪೂಜೆ ಹಿನ್ನೆಲೆ ರಾಮನ ಮುಂದೆ ಮೋದಿ ನಮಸ್ಕರಿಸಿರುವ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ. ಅಚ್ಚರಿಯೆಂದರೆ ಸಚಿನ್ ಅವರು ಇದಕ್ಕಾಗಿ ಯಾವುದೇ ವಿಶೇಷ ತರಬೇತಿ ಪಡೆದಿಲ್ಲವಂತೆ.