ಕಳೆದ ವರ್ಷ ಲಾಕ್ಡೌನ್ ಬಳಿಕ ವಿಮಾನಗಳಲ್ಲಿ ವಾಪಸ್ಸಾಗಿದ್ದ ವಲಸೆ ಕಾರ್ಮಿಕರಿಗೆ ಇದೀಗ ಮತ್ತೆ ಕೆಲಸಕ್ಕೆ ಕರೆಯಲಾಗಿದ್ದು, ಈ ಸಂಬಂಧ ಜಾರ್ಖಂಡ್ ಸರ್ಕಾರ 100ಕ್ಕೂ ಹೆಚ್ಚು ದೂರುಗಳನ್ನ ಸ್ವೀಕರಿಸಿದೆ.
ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಈ ದೂರುಗಳನ್ನ ಸಲ್ಲಿಸಿದ್ದಾರೆ. ಇವರ ಪ್ರಯಾಣಕ್ಕೆಂದು ವ್ಯವಸ್ಥೆ ಮಾಡಲಾಗಿದ್ದ ವಿಮಾನ ಪ್ರಯಾಣದ ದರವನ್ನ ಇದೀಗ ಸಂಬಳದಲ್ಲಿ ಕಡಿತ ಮಾಡಿಕೊಳ್ಳಲಾಗ್ತಿದೆ ಎಂದು ದೂರು ನೀಡಿದ್ದಾರೆ.
ಓರ್ವ ವ್ಯಕ್ತಿ ನೀಡಿದ ದೂರಿನಲ್ಲಿ ಆತನಿಗೆ ಚೆನ್ನೈನ ಕಂಪನಿಯು ವಿಮಾನದ ಮೂಲಕ ಕೆಲಸಕ್ಕೆ ಕರೆಸಿಕೊಂಡಿದೆ ಎಂದು ಹೇಳಿದ್ದಾನೆ. ಕಂಪನಿಯು ಎಲ್ಲಾ ಖರ್ಚು ವೆಚ್ಚಗಳನ್ನ ತಾನೇ ಭರಿಸಿಕೊಳ್ಳುತ್ತೇನೆ ಎಂದು ನಂಬಿಸಿ ನನ್ನನ್ನ ಕೆಲಸಕ್ಕೆ ಕರೆಯಿಸಿತ್ತು. ಆದರೆ ಈಗ ನನ್ನ ಹಣ ಕಂತಿನ ರೂಪದಲ್ಲಿ ವೇತನದಿಂದ ಕಡಿತ ಮಾಡಿಕೊಳ್ತಿದ್ದಾರೆ ಎಂದು ದೂರಿದ್ದಾನೆ. ಲಾಕ್ಡೌನ್ ಸಂದರ್ಭದಲ್ಲಿ 9 ಲಕ್ಷಕ್ಕೂ ಹೆಚ್ಚು ಮಂದಿ ಜಾರ್ಖಂಡ್ಗೆ ಮರಳಿದ್ದರು.