ಹೈದರಾಬಾದ್: ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಕೊರೊನಾ ಎರಡನೇ ಅಲೆಗೆ ತುತ್ತಾಗುವುದು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ತೆಲಂಗಾಣದಲ್ಲಿ 5 ಸಾವಿರ ರೋಗಿಗಳು ಖಾಸಗಿ ಹಾಗೂ ಕಾರ್ಪೊರೆಟ್ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ವಿಶೇಷವಾಗಿ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಎದುರಾಗ್ತಿದೆ.
ಮೊದಲ ಕೊರೊನಾ ಅಲೆಯಲ್ಲಿ ಕೆಳವರ್ಗದ ಜನರು ಹೆಚ್ಚಿನ ಮಟ್ಟದಲ್ಲಿ ಸೋಂಕಿಗೆ ಒಳಗಾಗಿದ್ದರು. ಆದ್ರೆ ಈ ಬಾರಿ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಇದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ತೆಲಂಗಾಣ ರಾಜ್ಯದಲ್ಲಿ 2 ಸಾವಿರ ಮಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ್ರೆ 5 ಸಾವಿರ ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತೆಲಂಗಾಣದ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ. ಶ್ರೀನಿವಾಸ ರಾವ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಹೆಚ್ಚು ಸ್ಪಷ್ಟವಾಗಲಿದೆ. ಹಾಗೆ ಹಿಂದಿನ ಬಾರಿ ಸೋಂಕಿಗೆ ತುತ್ತಾಗದ ಜನರು ಈ ಬಾರಿ ಸೋಂಕಿಗೆ ತುತ್ತಾಗುತ್ತಿದ್ದಾರೆಂದು ಅವರು ಹೇಳಿದ್ದಾರೆ. ಪರೀಕ್ಷೆ ಹಾಗೂ ಕಠಿಣ ಕ್ರಮದ ಜೊತೆ ರಾಜ್ಯದಲ್ಲಿ ಲಸಿಕೆ ಸೆಂಟರ್ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕಾರ್ಪೊರೇಟ್ ಆಸ್ಪತ್ರೆಗಳು ಕೂಡ ಮೇಲ್ಮಧ್ಯಮ ವರ್ಗದ ಜನರಲ್ಲಿ ಕೊರೊನಾ ಹೆಚ್ಚಿದೆ ಎಂಬುದನ್ನು ಹೇಳಿದೆ. ಜನರು ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗ್ತಿದ್ದಾರೆ. ಇದೂ ಕೊರೊನಾ ಹರಡಲು ಕಾರಣವಾಗ್ತಿದೆ. ಆದ್ರೆ ಯಾಕೆ ಕೊರೊನಾ ಮಧ್ಯಮ ವರ್ಗದವರನ್ನು ಹೆಚ್ಚು ಕಾಡ್ತಿದೆ ಎಂಬ ಬಗ್ಗೆ ವೈದ್ಯರು ವಿಜ್ಞಾನಿಕ ಕಾರಣವನ್ನು ವಿವರಿಸಿಲ್ಲ.