ನವದೆಹಲಿ: ಸೆಪ್ಟೆಂಬರ್ 1 ರಿಂದ ಆರಂಭವಾಗಲಿರುವ ಅನ್ಲಾಕ್ -4 ಹಂತದಲ್ಲಿ ಮೆಟ್ರೋ ರೈಲು ಸೇವೆಗಳ ಆರಂಭಕ್ಕೆ ಅನುಮತಿ ಸಿಗಬಹುದು. ಆದರೆ, ಶಾಲೆ-ಕಾಲೇಜುಗಳನ್ನು ಶೀಘ್ರದಲ್ಲೇ ಪುನಾರಂಭ ಮಾಡುವ ಸಾಧ್ಯತೆ ಇಲ್ಲವೆಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಾರ್ ಗಳನ್ನು ಓಪನ್ ಮಾಡಲು ಕೂಡ ಅನುಮತಿ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಕೊರೋನಾ ಸೋಂಕು ತಡೆ ಉದ್ದೇಶದಿಂದ ಲಾಕ್ ಡೌನ್ ಜಾರಿ ಮಾಡಲಾಗಿದ್ದು ಅನ್ಲಾಕ್ ಹಂತಗಳು ಆರಂಭವಾಗಿ ಅನೇಕ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
ಸೆಪ್ಟಂಬರ್ 1 ರಿಂದ ಅನ್ಲಾಕ್ -4 ಆರಂಭವಾಗಲಿದ್ದು ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ಸಿಗಬಹುದು. ಆದರೆ, ಶಾಲೆ-ಕಾಲೇಜುಗಳನ್ನು ತಕ್ಷಣಕ್ಕೆ ಮತ್ತೆ ತೆರೆಯುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.