ಕೇಂದ್ರ ಸರ್ಕಾರವು ಪಬ್ ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸತೊಂದು ಆಟ ಘೋಷಿಸಿದ್ದಾರೆ.
ಬೆಂಗಳೂರು ಮೂಲದ ಎನ್ ಕೋರ್ ಎಂಬ ಕಂಪನಿಯು ಪಬ್ ಜಿ ಬದಲಿಗೆ ಫೌ ಜಿ ( ಫಿಯರ್ಲೆಸ್ ಅಂಡ್ ಯುನೈಟೆಡ್ – ಗಾರ್ಡ್ಸ್) ಎಂಬ ಗೇಮ್ ಕಂಡುಹಿಡಿದಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನದ ಪರಿಣಾಮವಾಗಿ ಈ ಆಕ್ಷನ್ ಗೇಮ್ ಹುಟ್ಟಿಕೊಂಡಿದ್ದು, ಇದರಿಂದ ಮನರಂಜನೆ ಮಾತ್ರವಲ್ಲದೆ, ನಮ್ಮ ಸೈನಿಕರ ತ್ಯಾಗ-ಬಲಿದಾನಗಳನ್ನೂ ಅರ್ಥ ಮಾಡಿಕೊಂಡು ಕಲಿಯಲು ಅವಕಾಶ ಇರಲಿದೆ. ಈ ಆಕ್ಷನ್ ಗೇಮ್ ನಿಂದ ಉತ್ಪತ್ರಿಯಾಗುವ ಆದಾಯದ ಶೇ.20 ರಷ್ಟು ಹಣವು ಭಾರತ್ ಕೆ ವೀರ್ ಎಂಬ ಟ್ರಸ್ಟ್ ಗೆ ಸಂದಾಯ ಆಗಲಿದೆ. ಅಕ್ಷಯ್ ಕುಮಾರ್ ಅವರೇ ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದು, ವೈರಲ್ ಆಗಿರುವುದೂ ಅಲ್ಲದೆ, ತರಹೇವಾರಿ ಕಮೆಂಟ್ ಗಳೂ ಬಂದಿವೆ.
https://twitter.com/Sarcasmiclol/status/1301841659697610753?ref_src=twsrc%5Etfw%7Ctwcamp%5Etweetembed%7Ctwterm%5E1301841659697610753%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fmere-pass-ek-scheme-hai-akshay-kumars-fau-g-announcement-after-pubg-ban-triggers-meme-fest-online%2F648079