ಮಹಿಳೆಯರು ತಾವು ಪುರುಷರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ಪದೇ ಪದೇ ಸಾಬೀತು ಮಾಡ್ತಾನೇ ಇದ್ದಾರೆ. ಕೆಲ ಮಹಿಳೆಯರ ಸಾಧನೆಯಂತೂ ಸಾಮಾನ್ಯರ ಹುಬ್ಬೇರಿಸುವಂತೆ ಮಾಡಿಬಿಡುತ್ತೆ.
ಇದೇ ಸಾಲಿಗೆ ಹಿಮಾಚಲ ಪ್ರದೇಶದ ಮಹಿಳೆ ಸೀಮಾ ಠಾಕೂರ್ ಸಹ ಸೇರಿದ್ದಾರೆ. ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯಲ್ಲಿ ಚಾಲಕಿಯಾಗಿರುವ ಸೀಮಾ ಶಿಮ್ಲಾ ಟು ಚಂಡೀಗಢಕ್ಕೆ ಬಸ್ ಚಲಾಯಿಸುವ ಮೂಲಕ ಹಿಮಾಚಲ ಪ್ರದೇಶದ ಮೊದಲ ಅಂತರಾಜ್ಯ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
8813 ಸಿಬ್ಬಂದಿಯನ್ನ ಹೊಂದಿರುವ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯಲ್ಲಿ ಸೀಮಾ ಏಕೈಕ ಮಹಿಳಾ ಚಾಲಕಿ. ತಂದೆ, ತಾಯಿ ಹಾಗೂ ತಮ್ಮನ ಜೊತೆ ವಾಸವಿರುವ ಸೀಮಾ ತಮ್ಮ ಕೆಲಸದ ಬಗ್ಗೆ ತುಂಬಾನೇ ತೃಪ್ತಿ ವ್ಯಕ್ತಪಡಿಸ್ತಾರೆ. ಲಾಕ್ಡೌನ್ ಹಾಗೂ ಕೊರೊನಾ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ಮುಂಚೂಣಿ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಕ್ಕೆ ಖುಷಿ ಇದೆ ಅಂತಾರೆ ಸೀಮಾ.
ನಾನು ಹಿಮಾಚಲ ಪ್ರದೇಶ ರಾಜ್ಯದ ಮೊದಲ ಮಹಿಳಾ ಬಸ್ ಚಾಲಕಿ. ನಾನು 2016ರ ಮೇ 5ರಂದು ಹೆಚ್ಆರ್ಟಿಸಿ ನೇಮಕಗೊಂಡೆ. ನಾನು ಕೊರೊನಾ ವೈರಸ್ ಮಹಾಮಾರಿ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದೇನೆ. ವೈದ್ಯರು, ನರ್ಸ್ ಹಾಗೂ ಪೊಲೀಸ್ ಇಲಾಖೆಯ ಮಹಿಳೆ ಸಿಬ್ಬಂದಿಯಂತೆ ನಾನು ಕೂಡ ಮುಂಚೂಣಿ ಸಿಬ್ಬಂದಿಯಂತೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಸೀಮಾ ಹೇಳಿದ್ರು.