ವಿದ್ಯುತ್ ಸೌಕರ್ಯವೇ ಇಲ್ಲದ ಮನೆಯಲ್ಲಿ ಜೀವನ ಮಾಡೋಕೆ ನಿಮ್ಮಿಂದ ಸಾಧ್ಯವಿದೆಯೇ..? ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನ ಸಾಬೀತು ಮಾಡಿ ತೋರಿಸಿದ್ದಾರೆ ಪರಿಸರವಾದಿ ಸೌಮ್ಯ ಪ್ರಸಾದ್.
40 ವರ್ಷದ ಸೌಮ್ಯ ಪ್ರಸಾದ್ ಕಳೆದ ಮೂರು ವರ್ಷಗಳಿಂದ ವಿದ್ಯುತ್ ಬಿಲ್ ಅಥವಾ ನೀರಿನ್ ಬಿಲ್ಗೆ ಒಂದು ಪೈಸೆಯನ್ನೂ ಪಾವತಿ ಮಾಡಿಲ್ಲ.
ಹಾಗಂತ ಸೌಮ್ಯ ಪ್ರಸಾದ್ ಅನ್ಯ ಗ್ರಹದ ಜೀವಿಯಂತೆ ಬದುಕುತ್ತಿದ್ದಾರಾ ಎಂದು ಭಾವಿಸಬೇಡಿ. ಇವರು ಕೂಡ ನಮ್ಮಂತೆಯೇ ಸಾಮಾಜಿಕ ಜೀವನವನ್ನ ಸಾಗಿಸುತ್ತಿದ್ದಾರೆ. ಕಾರು ಸೇರಿದಂತೆ ಆಧುನಿಕ ಜೀವನದ ಎಲ್ಲಾ ಸೌಕರ್ಯಗಳನ್ನೂ ಇವರು ಎಂಜಾಯ್ ಮಾಡ್ತಾರೆ. ಆದರೆ ಈ ಐಷಾರಾಮಿ ಜೀವನದಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಸೌಮ್ಯ ಪ್ರಸಾದ್ ಕಳೆದ ಅನೇಕ ವರ್ಷಗಳಿಂದ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನ ರೂಢಿಸಿಕೊಂಡಿದ್ದಾರೆ. ಮನೆಯಲ್ಲಿ ವಿದ್ಯುತ್ ಪೂರೈಕೆ ಬದಲು ಸೌರಶಕ್ತಿಯನ್ನ ಬಳಕೆ ಮಾಡಲಾಗುತ್ತಿದೆ.
ಮನೆ ನೀರಿನ ಪೂರೈಕೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನ ಬಳಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪರಿಸರ ರಕ್ಷಣೆ ಆಗೋದ್ರ ಜೊತೆ ಜೊತೆಗೆ ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್ನಲ್ಲಿ ಸಾವಿರಾರು ರೂಪಾಯಿ ಉಳಿಕೆ ಮಾಡಿದ್ದಾರೆ.