
ಯುವಕರು ಹಾಗೂ ವಿದ್ಯಾವಂತರು ರಾಜಕೀಯ ವ್ಯವಸ್ಥೆಗೆ ಬರುವುದಿಲ್ಲವೆಂಬ ದೂರಿಗೆ ಅಪರೂಪಕ್ಕೆ ಅಪವಾದಗಳು ಕೇಳಿ ಬರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಲಖನೌ ವಿವಿಯಲ್ಲಿ ಬಿಎ ಪದವಿ ಪಡೆದು ಕಾನೂನು ವ್ಯಾಸಂಗ ಮಾಡುತ್ತಿರುವ 21 ವರ್ಷ ವಯಸ್ಸಿನ ಆರುಶಿ ಸಿಂಗ್, ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಶೆಹೆರಿಯಾ ಗ್ರಾಮದ ಪ್ರಧಾನರಾಗಿ ನೇಮಕಗೊಂಡಿದ್ದಾರೆ.
ನಗರದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸುತ್ತಿರುವ ಸಿಂಗ್, ಇತ್ತೀಚೆಗೆ ನಡೆದ ಉ.ಪ್ರ. ಪಂಚಾಯಿತಿ ಚುನಾವಣೆಯಲ್ಲಿ ತಾವು ಸ್ಫರ್ಧಿಸಿದ್ದ ಕ್ಷೇತ್ರದಿಂದ 384 ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದಾರೆ. ಗ್ರಾಮ ಪ್ರಧಾನರ ಹುದ್ದೆಗೆ ಇನ್ನೂ ನಾಲ್ವರು ಆಕಾಂಕ್ಷಿಗಳಿದ್ದರೂ, ಸಿಂಗ್ ಅವರೇ ನೇಮಕಗೊಂಡಿದ್ದಾರೆ.
ಭಾವುಕರನ್ನಾಗಿಸುತ್ತೆ ರಾಜ್ಯದ ನರ್ಸಿಂಗ್ ಸಿಬ್ಬಂದಿಗೆ ಸಿಕ್ಕ ಗೌರವ
ಕೋವಿಡ್-19 ಸುರಕ್ಷತಾ ಮಾನದಂಡಗಳನ್ನು ಪೂರೈಸಿಕೊಂಡೇ ಮನೆ ಮನೆ ಬಾಗಿಲಿಗೆ ತೆರಳಿ ಪ್ರಚಾರ ನಡೆಸಿದ ಸಿಂಗ್ ತಮ್ಮ ಗೆಲುವಿನ ಬಗ್ಗೆ ಹೀಗೆ ಹೇಳುತ್ತಾರೆ: “ಇದು ನನಗೆ ಕನಸು ನನಸಾದಂತೆ ಅನಿಸುತ್ತಿದೆ, ಮಧ್ಯಾಹ್ನ 1:30ರ ವೇಳೆಗೆ ನಾನು ಜಯಶಾಲಿ ಎಂದು ಘೋಷಿಸಲಾಯಿತು. ಕೂಡಲೇ ಸ್ನೇಹಿತರು ಹಾಗೂ ಸಂಬಂಧಿಕರು ಕರೆ ಮಾಡಲು ಆರಂಭಿಸಿದರು. ಅಂತರ್ಜಾಲದ ಸಂಪರ್ಕ ಹಾಗೂ ಸಾರ್ವಜನಿಕ ಸೇವೆಗಳ ಮೂಲಕ ಈ ಊರನ್ನು ಸ್ಮಾರ್ಟ್ ಗ್ರಾಮ ಮಾಡುವುದು ನನ್ನ ಕರ್ತವ್ಯವಾಗಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.