ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶದೆಲ್ಲೆಡೆ ಆಕ್ಸಿಜನ್‌ಗೆ ದೊಡ್ಡಮಟ್ಟದ ಸಮಸ್ಯೆ ಉಂಟಾಯಿತು. ಈ ವೇಳೆ ಅನೇಕರು ಈ ಸಂದರ್ಭದಲ್ಲಿ ಆಕ್ಸಿಜನ್ ತಲುಪಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಪ್ರಯತ್ನಿಸಿದರು. ಇಂಥವರ ಸಾಲಿನಲ್ಲಿ ಒಬ್ಬ ಯುವತಿ ಗಮನ ಸೆಳೆದಿದ್ದಾರೆ.
ಶಹಜಾನ್ಪುರದ ಇಪ್ಪತ್ತಾರು ವರ್ಷದ ಅರ್ಷಿ ಅಕಾ ಕೋವಿಡ್ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಸರಬರಾಜು ಮಾಡಿ ‘ಸಿಲಿಂಡರ್ ವಾಲಿ’ ಎಂದೆ ಕರೆಸಿಕೊಂಡಿದ್ದಾರೆ.
ಈಕೆ ತನ್ನ ಸ್ಕೂಟರ್‌ನಲ್ಲಿ ಮನೆಮನೆಗೆ ಸುತ್ತಿ ಅಗತ್ಯ ಇರುವವರಿಗೆ ಆಕ್ಸಿಜನ್ ಒದಗಿಸಿದ್ದಾರೆ. ಈಕೆ ಈ ಕೆಲಸ ಮಾಡಲು ಒಂದು ಕಹಿ ಘಟನೆ ಕಾರಣವಾಗಿದೆ.
ಬ್ರೆಥಲೈಸರ್ ಟೆಸ್ಟ್ ಗೆ ಒಳಗಾಗುವ ಮುನ್ನ ಇರಲಿ ‘ಎಚ್ಚರ’…!
ಆಕೆಯ ತಂದೆ ಕೊರೋನಾ ವೈರಸ್‌ಗೆ ತುತ್ತಾದಾಗ ಅವರಿಗೆ ಆಮ್ಲಜನಕದ ಅಗತ್ಯವಿತ್ತು, ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾಗ ಸಮಸ್ಯೆ ಉಂಟಾಗಿದ್ದು, ಸ್ಥಳೀಯ ಅಧಿಕಾರಿಗಳು ಆಮ್ಲಜನಕವನ್ನು ನೀಡಲು ನಿರಾಕರಿಸಿದ್ದರು.
ನಂತರ ವಾಟ್ಸಾಪ್ ಮೂಲಕ ಉತ್ತರಾಖಂಡ ಮೂಲದ ಸಾಮಾಜಿಕ ಸಂಘಟನೆ ಸಹಕಾರದಿಂದ ಆಮ್ಲಜನಕ ಪಡೆದುಕೊಂಡರು. ಬಳಿಕ ಅನಾರೋಗ್ಯದಿಂದ ಅವರ ತಂದೆ ಚೇತರಿಸಿಕೊಂಡರು. ತನಗಾದ ಅನುಭವ ಗಮನಿಸಿ ಸಮಸ್ಯೆಗೆ ಸಿಲುಕಿದವರಿಗೆ ನೆರವಾಗಲು 20 ಸಿಲಿಂಡರ್ ಬಳಸಿ ಉಚಿತ ಆಕ್ಸಿಜನ್ ಸೇವೆ ನೀಡುತ್ತಿದ್ದಾರೆ.