ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 100 ವರ್ಷದ ಸರ್ದಾರ್ ಕೌರ್ ಕೊರೊನಾ ಗೆದ್ದು ಬಂದಿದ್ದಾರೆ. ಸರ್ದಾರ್ ಕೌರ್ ಜೊತೆ ಅವರ ಕುಟುಂಬದ ಐದು ಜನರು ಕೊರೊನಾ ಯುದ್ಧದಲ್ಲಿ ಗೆದ್ದಿದ್ದಾರೆ. 100 ವರ್ಷದ ಸರ್ದಾರ್ ಕೌರ್ ಕೊರೊನಾ ಗೆದ್ದಿರುವುದು ಎಲ್ಲರ ಖುಷಿಗೆ ಕಾರಣವಾಗಿದೆ. ಮನೆಯಲ್ಲಿ ಸಂತೋಷ ಮನೆ ಮಾಡಿದೆ. ಕುಟುಂಬ್ಥರು ಸರ್ದಾರ್ ಕೌರ್ ಹುಟ್ಟುಹಬ್ಬ ಆಚರಿಸಿದ್ದಾರೆ.
100 ವರ್ಷದ ಅಜ್ಜಿ ಸರ್ದಾರ್ ಕೌರ್ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಕುಟುಂಬಸ್ಥರು ಆಕೆಯಿಂದ ದೂರವಿರಲಿಲ್ಲ. ಮೊಮ್ಮಗ ಮತ್ತು ಸೊಸೆ ಅಜ್ಜಿ ಸೇವೆ ಮಾಡಿದ್ದರು. ಅಜ್ಜಿ ಚೇತರಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು 100 ನೇ ಹುಟ್ಟುಹಬ್ಬವನ್ನು ಆಚರಿಸಿದರು.
ಸುಮಾರು 15 ದಿನಗಳ ಕಾಲ ಕುಟುಂಬಸ್ಥರು ಬಹಳ ಕಷ್ಟಪಟ್ಟಿದ್ದಾರೆ. ಆದ್ರೆ ಧೈರ್ಯ ಕಳೆದುಕೊಳ್ಳದ ಕುಟುಂಬಸ್ಥರು ಕೊರೊನಾ ಗೆದ್ದಿದ್ದಾರೆ. ಕ್ರಿಯಾಶೀಲತೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದಾಗಿ ಈ ಯುದ್ಧವನ್ನು ಅಜ್ಜಿ ಗೆದ್ದಿದ್ದಾರೆಂದು ಕುಟುಂಬಸ್ಥರು ಹೇಳಿದ್ದಾರೆ.