
25 ವರ್ಷದ ಹರ್ಷಿತ್ 2018ರಲ್ಲಿ ಸೂರತ್ನಲ್ಲಿ ಆಭರಣ ವಿನ್ಯಾಸದ ಬಗ್ಗೆ ತರಬೇತಿ ಪಡೆಯುತ್ತಿದ್ದಾಗ ವಿಶ್ವ ದಾಖಲೆ ನಿರ್ಮಿಸಬೇಕೆಂಬ ಕನಸನ್ನ ಹೊಂದಿದ್ದರು. ಸಮೃದ್ಧಿಯ ಉಂಗುರ ಎಂದು ಹೆಸರಿಸಲಾದ ಈ ವಿಶ್ವ ದಾಖಲೆ ನಿರ್ಮಿತ ಉಂಗುರ ಚೆಂಡು ಹೂವಿನ ಆಕಾರವನ್ನ ಹೊಂದಿದೆ. ಈ ಉಂಗುರಕ್ಕೆ 38.08 ಕ್ಯಾರೆಟ್ ನೈಸರ್ಗಿಕ ವಜ್ರಗಳನ್ನ ಅಳವಡಿಸಲಾಗಿದೆ.
ಈ ಉಂಗುರವು ಸರಿಸುಮಾರು 165 ಗ್ರಾಂ ತೂಕ ಹೊಂದಿದೆ. 8 ಹೂವಿನ ದಳಗಳ ಪದರ ಹೊಂದಿದ್ದು ಪ್ರತಿಯೊಂದು ದಳವು ವಿಶಿಷ್ಟ ವಿನ್ಯಾಸ ಹೊಂದಿದೆ. ಹರ್ಷಿತ್ 2018ರಲ್ಲಿ 18 ಕ್ಯಾರೆಟ್ ಚಿನ್ನದ ಉಂಗುರದಲ್ಲಿ ಕೆಲಸ ಮಾಡಲು ಆರಂಭಿಸಿದರು. ಹಾಗೂ ಕಳೆದ ವರ್ಷ ನವೆಂಬರ್ನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ.
ತೋಟದಲ್ಲಿದ್ದ ಚೆಂಡು ಹೂವನ್ನ ಕಂಡ ಹರ್ಷಿತ್ ಇದೇ ಮಾದರಿಯಲ್ಲಿ ಉಂಗುರವನ್ನ ತಯಾರಿಸಲು ನಿರ್ಧಾರ ಮಾಡಿದರಂತೆ. ಈ ಮೂಲಕ ಹರ್ಷಿತ್ 7801 ವಜ್ರಗಳೊಂದಿಗೆ ಹೈದರಾಬಾದ್ನ ಚಂದುಭಾಯ್ ದಿ ಡಿವೈನ್ – 7801 ಬ್ರಹ್ಮ ವಜ್ರ ಕಮಲಂ ವಜ್ರದ ಉಂಗುರದ ದಾಖಲೆಯನ್ನ ಮುರಿದಿದ್ದಾರೆ.

