ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಕೊರೊನಾ ರೋಗಿಗಳನ್ನ ದಟ್ಟ ಮಂಜಿನ ನಡುವೆಯೂ ಆಂಬುಲೆನ್ಸ್ ಡ್ರೈವರ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಂಡಿಯ ನೆರ್ ಚೌಕ್ ಮೆಡಿಕಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಆಂಬುಲೆನ್ಸ್ ಡ್ರೈವರ್ ಮನೋಜ್ ಹಾಗೂ ತುರ್ತು ವೈದ್ಯಕೀಯ ಸೇವಾ ತಂತ್ರಜ್ಞೆ ಜಯಲಲಿತಾ ಎಂಬವರು ತಮ್ಮ ಜೀವವನ್ನೂ ಲೆಕ್ಕಿಸದೇ ದಟ್ಟ ಮಂಜಿನಲ್ಲಿ ಇಬ್ಬರು ಕೊರೊನಾ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಯ್ಲೊಂಗ್ನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಸೋಂಕಿತರನ್ನ ನೆರ್ ಚೌಕ್ ಮೆಡಿಕಲ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಬೇಕಾಗಿತ್ತು. ಆದರೆ ರಸ್ತೆಯಲ್ಲಿ 30-35 ಸೆ.ಮೀ ದಪ್ಪದ ಮಂಜು ಶೇಖರಣೆಯಾಗಿತ್ತು. ಮಾತ್ರವಲ್ಲದೇ ಮನಾಲಿ ಅಟಲ್ ಟನೆಲ್ ಕೂಡ ಮಂಜಿನಿಂದ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು. ಈ ಎಲ್ಲ ಸವಾಲುಗಳನ್ನ ಮೀರಿ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸುವಲ್ಲಿ ಈ ಇಬ್ಬರು ಯಶಸ್ವಿಯಾಗಿದ್ದಾರೆ.