ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಪತಂಜಲಿ ಕೊರೊನಿಲ್ ಎಂಬ ಮಾತ್ರೆಯನ್ನು ಬಿಡುಗಡೆ ಮಾಡಿತ್ತು. ಇದು ಕೊರೊನಾ ನಿಯಂತ್ರಣಕ್ಕೆ ಒಳ್ಳೆ ಮದ್ದು ಎಂದು ಬಾಬಾ ರಾಮ್ ದೇವ್ ಹೇಳಿದ್ದರು. ಆದ್ರೆ ಈ ಮಾತ್ರೆ ಈಗ ಬಹುತೇಕ ಪ್ರದೇಶಗಳಲ್ಲಿ ಔಟ್ ಆಫ್ ಸ್ಟಾಕ್ ಆಗಿದೆ. ದೆಹಲಿ, ಗುರುಗ್ರಾಮ್, ಬೆಂಗಳೂರು ಸೇರಿದಂತೆ ಅನೇಕ ದೊಡ್ಡ ನಗರಗಳಲ್ಲಿ ಈ ಮಾತ್ರೆ ಸಿಗ್ತಿಲ್ಲ.
ಕೊರೊನಿಲ್ ಔಷಧಿ, ಕೊರೊನಾಕ್ಕೆ ಒಳ್ಳೆಯ ಮದ್ದು ಎಂಬುದನ್ನು ಭಾರತೀಯ ವೈದ್ಯಕೀಯ ಸಂಘ ಹೇಳಿಲ್ಲ. ಈ ಬಗ್ಗೆ ಐಎಂಎ ಆತಂಕ ವ್ಯಕ್ತಪಡಿಸಿದೆ. ಇದು ಅವೈಜ್ಞಾನಿಕ ಉತ್ಪನ್ನವೆಂದು ಐಎಂಎ ಹೇಳಿದೆ. ಕೊರೊನಾ ಎರಡನೇ ಅಲೆಯಲ್ಲಿ ಅನೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಿಲ್ ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೊರೊನಿಲ್ ಔಟ್ ಆಫ್ ಸ್ಟಾಕ್ ಆಗಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಕೊರೊನಾ ವೈರಸ್ ಗೆ ಇದು ಉತ್ತಮ ಔಷಧಿ ಎಂಬ ಪತಂಜಲಿ ಹೇಳಿಕೆಯನ್ನು ಐಎಂಎ ಖಂಡಿಸಿತ್ತು. ಅವೈಜ್ಞಾನಿಕ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುವುದು ಎಷ್ಟು ಸರಿ ಎಂದು ಕೇಂದ್ರ ಆರೋಗ್ಯ ಸಚಿವರನ್ನು ಐಎಂಎ ಪ್ರಶ್ನೆ ಮಾಡಿತ್ತು. ಮುಂಬೈ ಸ್ಟೋರ್ ಗಳಲ್ಲಿ ದಿನಕ್ಕೆ ಸಾವಿರ ಕರೆಗಳು ಬರ್ತಿವೆ.