
ನವದೆಹಲಿ: ಮೂರು ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಎಂಸಿಎ) ಕೋರ್ಸ್ ಇನ್ನು ಮುಂದೆ ಎರಡು ವರ್ಷದ ಕೋರ್ಸ್ ಆಗಿರಲಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಮಂಗಳವಾರ ಈ ಕುರಿತು ಘೋಷಣೆ ಮಾಡಿದ್ದು, 2020 -21 ನೇ ಶೈಕ್ಷಣಿಕ ಸಾಲಿನಿಂದ ಎಂಸಿಎ 2 ವರ್ಷದ ಕೋರ್ಸ್ ಆಗಿ ಬದಲಾಗಲಿದೆ.
ಯುಜಿಸಿ ನಿರ್ಧಾರ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅನುಮೋದನೆಗೆ ಅನುಗುಣವಾಗಿ ಈ ಮಾರ್ಪಾಡು ನಡೆಯಬೇಕಿದೆ ಎಂದು ತಿಳಿಸಲಾಗಿದೆ. ಯುಜಿಸಿ ಕಳೆದ ವರ್ಷವೇ ಎಂಸಿಎ ಶೈಕ್ಷಣಿಕ ಅವಧಿ ಕಡಿತಕ್ಕೆ ಒಪ್ಪಿಗೆ ನೀಡಿದ್ದು 2020 -21 ನೇ ಸಾಲಿನಿಂದ ಎಂಸಿಎ ಎರಡು ವರ್ಷದ ಕೋರ್ಸ್ ಆಗಿರಲಿದೆ ಎಂದು ಹೇಳಲಾಗಿದೆ.