ಪ್ರಳಯ ಆಗಿ ಭೂಮಂಡಲವೇ ಅಂತ್ಯವಾಗಲಿದೆ ಎಂದು ಆಗಾಗ ಹೇಳುತ್ತಲೇ ಬಂದಿರುವ ಕಾರಣ ಈ ಪ್ರಳಯದ ವಾರ್ನಿಂಗ್ ಗಳನ್ನು ಜನ ಸೀರಿಯಸ್ಸಾಗಿ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದಾರೆ.
ಇಂಥದ್ದೇ ಇನ್ನೊಂದು ಪ್ರಳಯ ಜೂನ್ 21ರಂದು ಆಗಲಿದೆ ಎಂದು ಕೆಲ ಮಾಧ್ಯಮಗಳು ಮತ್ತೊಮ್ಮೆ ವಾರ್ನಿಂಗ್ ಕೊಡುತ್ತಲೇ ಬಂದರೂ ಸಹ ಈ ಬಾರಿ ಜನರ ಅದಕ್ಕೆ ಕ್ಯಾರೇ ಎನ್ನಲಿಲ್ಲ.
ಕ್ಷುದ್ರ ಗ್ರಹವೊಂದು ಭೂಮಿಯತ್ತ ಹೊರಟಿದ್ದು ಅದು ಜೂನ್ 21ರಂದು ಡಿಕ್ಕಿ ಹೊಡೆದು ಇಡೀ ಭೂಮಂಡಲವೇ ಧ್ವಂಸವಾಗಲಿದೆ ಎಂಬ ವದಂತಿಗಳು ಸಾಕಷ್ಟು ಸದ್ದು ಮಾಡುತ್ತಿತ್ತು. ಇದನ್ನು ನಾಸಾ ನಿರಾಕರಿಸಿ, ಅಂಥ ಯಾವುದೇ ಸಾಧ್ಯತೆಗಳ ಮುನ್ಸೂಚನೆಯನ್ನು ನಾವು ನೋಡಿಲ್ಲ ಎಂದಿತ್ತು. ಈ ಪ್ರಳಯದ ವದಂತಿ ವಿಚಾರವೀಗ ಸಾಕಷ್ಟು ಅಪಹಾಸ್ಯಕ್ಕೆ ಗುರಿಯಾಗಿದ್ದು ಸಖತ್ ಟ್ರೋಲ್ ಆಗುತ್ತಿದೆ.