ಮದುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಮದುವೆಗೆ ಅನೇಕರು ಮ್ಯಾಟ್ರಿಮೋನಿಯಲ್ ಅವಲಂಭಿಸುತ್ತಾರೆ. ಜನರನ್ನು ಸೆಳೆಯಲು ಮ್ಯಾಟ್ರಿಮೋನಿಯಲ್ ಗಳು ಕೂಡ ಹೊಸ ಹೊಸ ವಿಧಾನವನ್ನು ಅನುಸರಿಸುತ್ತವೆ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಒಂದು ವರ್ಜಿನ್ ಹುಡುಗ, ಹುಡುಗಿ ಇದ್ರಲ್ಲಿ ಸಿಗ್ತಾರೆಂದು ಜಾಹೀರಾತು ಮಾಡಿದೆ. ಪ್ರೀತಿ, ನಂಬಿಕೆ ಅಡಿಪಾಯದ ಮೇಲೆ ನಿಲ್ಲಬೇಕಾದ ಮದುವೆ ಈಗ್ಲೂ ವರ್ಜಿನ್ ಮುಖ್ಯವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
Shadi ಡಾಟ್ ಕಾಮ್ ಹೆಸರಿನ ವೆಬ್ಸೈಟ್ ನಲ್ಲಿ ಈ ಜಾಹೀರಾತನ್ನು ನೀಡಲಾಗಿದೆ. ಇದು ಪ್ರಸಿದ್ಧ Shaadi ಡಾಟ್ ಕಾಮ್ ವೆಬ್ಸೈಟ್ ಗಿಂತ ಸ್ವಲ್ಪ ಭಿನ್ನವಾಗಿದೆ. ಇದ್ರಲ್ಲಿ ಒಂದು ಎ ಕಡಿಮೆಯಿದೆ. ಜನರು ಪ್ರಶ್ನೆ ಕೇಳಲು ಶುರು ಮಾಡ್ತಿದ್ದಂತೆ ಮಾರ್ಕೆಟಿಂಗ್ ಹೆಡ್ ಮೇಲೆ ಜವಾಬ್ದಾರಿ ಹಾಕಿದ್ದ ಕಂಪನಿ ನಂತ್ರ ಈ ಜಾಹೀರಾತನ್ನು ತೆಗೆದಿದೆ.
ಈಗ್ಲೂ ಭಾರತದಲ್ಲಿ ಅನೇಕ ಪುರುಷರು ವರ್ಜಿನ್ ಹುಡುಗಿ ಬೇಕೆನ್ನುತ್ತಾರೆ. ಇದನ್ನೇ ಮ್ಯಾಟ್ರಿಮೋನಿಯಲ್ ಬಂಡವಾಳ ಮಾಡಿಕೊಂಡಿತ್ತು. ಜನರನ್ನು ಆಕರ್ಷಿಸಲು ಹೀಗೆ ಮಾಡಿತ್ತು. ವರ್ಜಿನ್ ವಿಷ್ಯ ಬಂದಾಗ ಹುಡುಗಿಯರನ್ನು ಪ್ರಶ್ನೆ ಮಾಡಲಾಗುತ್ತದೆ. ಈಗ್ಲೂ ಅನೇಕ ಕಡೆ ಮದುವೆ ಮೊದಲ ರಾತ್ರಿ ಹುಡುಗಿ ವರ್ಜಿನಿಟಿ ಪರೀಕ್ಷೆ ಮಾಡಲಾಗುತ್ತದೆ.